ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಿಂದ ಎರಡು ಪ್ರತ್ಯೇಕ ದಾಳಿ:11 ಮಂದಿ ಸಾವು

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಿಂದ ಎರಡು ಪ್ರತ್ಯೇಕ ದಾಳಿ:11 ಮಂದಿ ಸಾವು

ಕಾಬೂಲ್, ಆಗುಸ್ಟ್ 25: ಆಫ್ಘಾನಿಸ್ತಾನದ ಮಧ್ಯ ಮತ್ತು ಉತ್ತರ ಪ್ರಾಂತ್ಯಗಳಲ್ಲಿ ಸೋಮವಾರ ರಾತ್ರಿಯಿಂದ ತಾಲಿಬಾನ್ ಉಗ್ರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 11 ಮಂದಿ


ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮಧ್ಯ ಅಫ್ಘಾನ್ ಪ್ರಾಂತ್ಯದ ಘೋರ್‌ನ ಶಹರಾಕ್ ಜಿಲ್ಲೆಯ ಪೊಲೀಸ್ ತಪಾಸಣಾ ಶಿಬಿರದಲ್ಲಿ ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಎಂಟು ಮಂದಿ ಆಫ್ಘಾನಿಸ್ತಾನ ಭದ್ರತಾ ಸಿಬ್ಬಂದಿ


ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಮುಖ್ಯಸ್ಥ ಮೊಹಮ್ಮದ್ ಸಖಿ ಸಬುರಿಯಾರ್ ಮಂಗಳವಾರ ತಿಳಿಸಿದ್ದಾರೆ.

ದಾಳಿಗೊಳಗಾದ ಇಬ್ಬರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮತ್ತೊಂದು ದಾಳಿಯಲ್ಲಿ ಉತ್ತರ ಆಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ಟ್ರಕ್ ಬಾಂಬ್ ಸ್ಫೋಟದಲ್ಲಿ ಮೂವರು  ಸಾವನ್ನಪ್ಪಿದ್ದು, ಇತರ ಅನೇಕರು ಗಾಯಗೊಂಡಿದ್ದಾರೆ.

ಆಫ್ಘನ್‍ ಕಮಾಂಡೋ ನೆಲೆಯನ್ನು ಗುರಿಯಾಗಿಸಿಕೊಂಡು ಸ್ಫೋಟಕ ತುಂಬಿದ ಟ್ರಕ್ ಅನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ್ದಾನೆ. ದಾಳಿಯಲ್ಲಿ ಇಬ್ಬರು ಕಮಾಂಡೋಗಳು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಸುದ್ದಿ ಓದಿ