ಮುಂಬಯಿನಲ್ಲೂ ಜಾರಿಗೆ ಬಂತು 10 ರೂಪಾಯಿ ಬಿಸಿ ಊಟ..!
ಮುಂಬೈ, ಡಿ 21 ಮಧ್ಯಾಹ್ನದ ಬಿಸಿ ಊಟ ಈಗ
ದೇಶದ ಜನಪ್ರಿಯ ಕಾರ್ಯಕ್ರಮವಾಗುತ್ತಿದೆ ಅನೇಕ ಸರಕಾರಗಳು ಇದನ್ನು ಪೈಪೋಟಿಯ ,ಮೇಲೆ ಜಾರಿಗೆ ತರುತ್ತಿವೆ.ಈಗ ಬೃಹತ್ ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)
ತನ್ನ ನೌಕರರಿಗೆ 10 ರೂಪಾಯಿಗೆ ಬಿಸಿ ಊಟ ಕೊಡುವ ಯೋಜನೆಯನ್ನು ಜಾರಿಗೊಳಿಸಿದೆ. ಮೇಲಾಗಿ ಮುಂಬೈ
ಮಹಾಜನತೆಗೂ ಕೇವಲ ಒಂದೆರಡು ದಿನದಲ್ಲಿ ಈ ಸೌಲಭ್ಯ
ದೊರಕಲಿದೆ ಎಂದು ಮೇಯರ್ ಕಿಶೋರಿ ಫೆಢ್ನೆಕರ್ ತಿಳಿಸಿದ್ದಾರೆ.ಬಿಎಂಸಿ ಮೇಯರ್ ಕಿಶೋರಿ ಫೆಢ್ನೆಕರ್
ಈ ಯೋಜನೆ ಗೆ ಈಗಾಗಲೇ ಚಾಲನೆ ನೀಡಿದ್ದಾರೆ 10 ರೂ
ಗಳಿಗೆ ಎರಡು ಚಪಾತಿ, ಅನ್ನ, ದಾಲ್, ಎರಡು ಖಾದ್ಯಗಳು
ಸಿಗಲಿದೆ. ಶಿವಸೇನಾ ತನ್ನ ಪ್ರಣಾಳಿಕೆಯಲ್ಲಿ ಈ
10 ರೂ ಊಟದ ಯೋಜನೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು, ಇದನ್ನು ನಗರದ ನಾಗರಿಕರಿಗೂ ವಿಸ್ತರಣೆ ಮಾಡುವುದಾಗಿ ಅವರು
ತಿಳಿಸಿದ್ದಾರೆ. ಕೇವಲ ಎರಡು ದಿನದಲ್ಲಿ ಜನರಿಂದ ಇದಕ್ಕೆ
ಉತ್ತಮ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ ಈ ಯೋಜನೆಯನ್ನು ಎಲ್ಲಾ ಜನರಿಗೂ ವಿಸ್ತರಿಸಲಾಗುವುದು
ಎಂದೂ ಕ್ಯಾಂಟಿನ್ ಮಾಲಿಕರು ತಿಳಿಸಿದ್ಧಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 