ಬೊಕೊ ಹರಾಮ್ ದಾಳಿಗೆ ನೈಜೀರಿಯಾದಲ್ಲಿ 10 ಮಂದಿ ಬಲಿ
ಅಬುಜಾ, ಎಪ್ರಿಲ್ 24: ಈಶಾನ್ಯ ನೈಜೀರಿಯಾದ ಯೋಬೆಯಲ್ಲಿ ಬೊಕೊ ಹರಾಮ್ ಭಯೋತ್ಪಾದಕ ಗುಂಪು ನಡೆಸಿದ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಶಸ್ತ್ರಸಜ್ಜಿತರಾಗಿ ಮೋಟಾರ್‌ಸೈಕಲ್‌ನಲ್ಲಿ ಬಂದ ಉಗ್ರಗಾಮಿಗಳು ಯೋಬ್‌ನ ಗೀಡಮ್ ಪಟ್ಟಣದ ಸಾರ್ವಜನಿಕ ಶಾಲೆಯೊಂದರ ಸಿಬ್ಬಂದಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ವಕ್ತಾರ ದುಂಗಾಸ್ ಅಬ್ದುಲ್ಕರೀಮ್ ಶನಿವಾರ ದಮಟೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಘಟನೆಯ ಮೊದಲ ಅಧಿಕೃತ ದೃಢೀಕರಣವನ್ನು ನೀಡಿದ ಅಬ್ದುಲ್ಕರೀಮ್, ಪಟ್ಟಣದಲ್ಲಿ ಪೊಲೀಸರು ಈಗಾಗಲೇ ಬಿಗಿ ಭದ್ರತೆಯನ್ನು ಮಾಡಿದ್ದಾರೆ ಎಂದು ಹೇಳಿದರು. ನಗರದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಮತ್ತೆ ಹಳಿಗೆ ಬಂದಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ಮರುಕಳಿಸದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.