ಚೀನಾದಲ್ಲಿ 1,656 ಹೊಸ ಕೊರೊನಾ ಪ್ರಕರಣಗಳು ಪತ್ತೆ
ಬೀಜಿಂಗ್: ಮಾರ್ಚ್ 20: ಚೀನಾದಲ್ಲಿ 1,656 ಹೊಸ ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ಈ ಮಾಹಿತಿ ನೀಡಿದೆ. ಆಯೋಗದ ಪ್ರಕಾರ, ಜಿಲಿನ್ ಪ್ರಾಂತ್ಯದಲ್ಲಿ 1191, ಫುಜಿಯಾನ್‌ನಲ್ಲಿ 158, ಶಾನ್‌ಡಾಂಗ್‌ನಲ್ಲಿ 51, ಗುವಾಂಗ್‌ಡಾಂಗ್‌ನಲ್ಲಿ 51 ಮತ್ತು ಲಿಯಾನಿಂಗ್ ಪ್ರಾಂತ್ಯದಲ್ಲಿ 39 ಪ್ರಕರಣಗಳು ಪತ್ತೆ ಆಗಿವೆ.
ಉಳಿದ ಪ್ರಕರಣಗಳು ಗನ್ಸು ಮತ್ತು ಟಿಯಾಂಜಿನ್ ಸೇರಿದಂತೆ 15 ಇತರ ಪ್ರಾಂತ್ಯಗಳ ಪ್ರದೇಶಗಳಲ್ಲಿ ವರದಿಯಾಗಿವೆ ಎಂದು ತಿಳಿಸಿದೆ. ಶನಿವಾರ ವಿದೇಶದಿಂದ ಆಗಮಿಸಿದ 81 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆಯೋಗವು ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.