ಕಾಂಗೋದಲ್ಲಿ 1,284 ಮಂಕಿಪಾಕ್ಸ್‌ನ ಶಂಕಿತ ಪ್ರಕರಣಗಳು ಪತ್ತೆ
ಕಿನ್ಶಾಸಾ: ಮೇ 21: ಆಫ್ರಿಕನ್ ಖಂಡದಲ್ಲಿರುವ ಕಾಂಗೋದಲ್ಲಿ ಕನಿಷ್ಠ 1,284 ಮಂಕಿ ಪಾಕ್ಸ್ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, 58 ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಈ ಮಾಹಿತಿ ನೀಡಿದೆ.
ಕಾಂಗೋದಲ್ಲಿನ ಸಂಸ್ಥೆಯ ಕಚೇರಿಯು ಕಾಂಗೋ ಪ್ರಾಂತ್ಯಗಳಾದ ಸಂಕುರು, ತ್ಶೋಪೋ, ಈಕ್ವಟೂರ್ ಮತ್ತು ತ್ಶುಪಾದಲ್ಲಿ 913 ಪ್ರಕರಣಗಳು ವರದಿಯಾಗಿವೆ ಎಂದು ಟ್ವೀಟ್ ಮಾಡಿದೆ, ಇದು ದೇಶಾದ್ಯಂತ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 75ರಷ್ಟಿದೆ.
ಮಂಕಿಪಾಕ್ಸ್ ಅತ್ಯಂತ ಕಡಿಮೆ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ರೋಗಿಯೊಂದಿಗೆ ಬಹಳ ನಿಕಟ ಸಂಪರ್ಕವಿದ್ದಾಗ ಮಾತ್ರ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಇದರಲ್ಲಿ, ರೋಗಿಗೆ ತುಂಬಾ ಸೌಮ್ಯವಾದ ಜ್ವರ ಇದ್ದು, ಹೆಚ್ಚಿನ ಜನರು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಜ್ವರ, ದೇಹದ ನೋವು, ತಲೆನೋವು, ದೇಹದ ಊತ, ಆಯಾಸ ಮತ್ತು ಗುಳ್ಳೆಗಳು ಕೆಲವು ಪ್ರಮುಖ ಲಕ್ಷಣಗಳಾಗಿವೆ.
ಮಾಧ್ಯಮ ವರದಿಗಳ ಪ್ರಕಾರ, ಬ್ರಿಟನ್, ಪೋರ್ಚುಗಲ್, ಸ್ಪೇನ್, ಸ್ವೀಡನ್ ಮತ್ತು ಅಮೆರಿಕದಿಂದ ಕೆಲವು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.