“ಓದಿನ ಸಂಸ್ಕಾರ ಮತ್ತು ಸತ್ಸಂಗದಿಂದ ಸಂಸ್ಕೃತಿ ನಿರ್ಮಾಣ” - ಪ್ರೊ. ಎಸ್.ಎಂ.ಶೇಖ
“Building Culture through Reading and Satsang” - Prof. S.M. Sheikh
ವಿಜಯಪುರ ಹಿ 05: ನಿರಂತರ ಅಧ್ಯಯನ ಶೀಲರಾಗಬೇಕು. ಸಾಹಿತ್ಯದ ವಿವಿಧ ಪ್ರಕಾರದ ಅರ್ಥವನ್ನು ಪೂರ್ಣ ಮನಸ್ಸಿನಿಂದ ಗ್ರಹಿಸಬೇಕು ಎಂದು ನಿ. ಪ್ರಾಚಾರ್ಯ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭವನ್ನು ಬಿ.ಎಲ್.ಡಿ.ಇ. ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ‘ಸಾಹಿತ್ಯ ಮತ್ತು ಸಂಸ್ಕೃತಿ ಅನುಷ್ಠಾನ’ ಕುರಿತು ಹೇಳುತ್ತಾ ಓದು ಮಸ್ತಕದಿಂದ ಮಸ್ತಿಷ್ಕದವರೆಗೆ ಇಳಿದಾಗ ಜೀವನ ಪಾವನವಾಗುವದೆಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ. ವಿ.ವಿ.ಮಳಗಿ ವಿಶ್ರಾಂತ ಕುಲಸಚಿವರು (ಮೌಲ್ಯಮಾಪನ) ಇವರು ಮಾತನಾಡುತ್ತ ‘ಪ್ರಯತ್ನವು ಮತ್ತು ತೀವ್ರ ಹಂಬಲ’ವನ್ನು ಹೊಂದಿ ಎ.ಎಸ್.ಹಿಪ್ಪರಗಿಯವರಂತೆ ನೀವಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ವಾಯ್.ತಮ್ಮಣ ಸಾಧಕರಿಗೆ ಸನ್ಮಾನ ಮಾಡಿ, ವಿದ್ಯಾರ್ಥಿನಿಯರು ನೀವು ಇವರ ಹಾಗೇ ಸನ್ಮಾನಗೊಳ್ಳುವಂತಾಗಬೇಕೆಂದಾಗ ಪ್ರತಿಷ್ಠಾನ ಕಾರ್ಯಗಳು ಸಾರ್ಥಕವಾಗುತ್ತವೆಂದರು. ಸಾಧಕರಾದ ಶಕುಂತಲಾ ಮೋಸಲಗಿ, ಶಿವಾನಂದ ಇಂಗಳೇಶ್ವರ ಮತ್ತು ಮಹಾಂತೇಶ ಅಂಗಡಿಯವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಿಂದ ವಚನಗಾಯನವಾಯಿತು. ಡಾ. ವಿ.ಡಿ.ಐಹೊಳ್ಳಿಯವರಿಂದ ಸ್ವಾಗತ ಪರಿಚಯ ಮಾಡಿದರು. ಎಸ್.ಎನ್.ಶಿವಣಗಿಯವರು ಸಾಧಕರನ್ನು ಪರಿಚಯಿಸಿದರು. ದೀಪಾ ಲಗಳಿ ಕಾರ‌್ಯಕ್ರಮ ನಿರೂಪಿಸಿದರು. ಸಂಗಮೇಶ ಬದಾಮಿ ವಂದಿಸಿದರು. ವಿ.ಸಿ.ನಾಗಠಾಣ, ಎಸ್.ಬಿ.ದೊಡಮನಿ, ಬಿ.ಕೆ.ಗೋಟ್ಯಾಳ, ಜಿ.ಬಿ.ಸಾಲಕ್ಕಿ, ಎಸ್.ಎಂ.ಸಾತಲಗಾಂವ, ಆರ್.ಎಸ್.ಬಿರಾದಾರ, ವಿವೇಕ ಬೀಳಗಿ, ಡಿ.ಬಿ.ಕೊಟ್ಟಗಿ, ಸಿಂಧೂರ, ಕುಡುಚಿ, ಎಚ್.ಎಲ್.ಸುರೇಶ ದೇವೂರ, ಸುಭಾಸ ಯಾದವಾಡ, ಶರಣಗೌಡ ಪಾಟೀಲ, ಅಶೋಕ ಹಿಪ್ಪರಗಿ ವಿದ್ಯಾವತಿ ಅಂಕಲಗಿ ಕಾಲೇಜಿನ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ‌್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ‌್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 