ಮುಂಡರಗಿ

ಶೇ. 4ರಷ್ಟು ಮೀಸಲಾತಿ ಮರಳಿ ಮುಸ್ಲಿಂ ಸಮಾಜಕ್ಕೆ ಕೊಡಬೇಕೆಂದು ಆಗ್ರಹಿಸಿ ಮನವಿ

ಶೇ. 4ರಷ್ಟು ಮೀಸಲಾತಿ ಮರಳಿ ಮುಸ್ಲಿಂ ಸಮಾಜಕ್ಕೆ ಕೊಡಬೇಕೆಂದು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಮುಂಡರಗಿ 30:  ಇತ್ತಿಚೆಗೆ ಬಿಜೆಪಿ ಸಕರ್ಾರ ಮುಸ್ಲಿಂ ಸಮಾಜದ 2ಬಿ ಶೇ. 4 ಮೀಸಲಾತಿಯನ್ನು ಕಸಿದುಕೊಂಡು, ಇನ್ನೊಬ್ಬರಿಗೆ ನೀಡಿರುವುದು ನಮ್ಮ ಸಮಾಜಕ್ಕೆ ಅನ್ಯಾಯವನ್ನು ಮಾಡಿದಂತಾಗುತ್ತದೆ. ಆದ್ದರಿಂದ ಈ ಹಿಂದೆ ಇದ್ದ 2ಬಿ ಶೇ. 4 ರಷ್ಟು ಮೀಸಲಾತಿಯನ್ನು ಮತ್ತೆ ಮರಳಿ ಮುಸ್ಲೀಂ ಸಮಾಜಕ್ಕೆ ಕೊಡಬೇಕೆಂದು ಆಗ್ರಹಿಸಿ ಮಾ.30 ರಂದು ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಮಹೆಬೂಬಸಾಬ ಹವಾಲ್ದಾರ ಹೇಳಿದರು.

ಪಟ್ಟಣದ ಶಾದಿಮಹಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮುಸ್ಲೀಂ ಸಮಾಜಕ್ಕೆ ಈ ಹಿಂದೆಯೂ ಹಜ್, ಹಲಾಲ್ ಹೀಗೆ ಹಲವು ಉಡುಪುಗಳ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲದಿರುವುದು ಖಂಡನೀಯ ಎಂದು ಹೇಳಿದರು.

ಮುಸ್ಲೀಂ ಸಮಾಜದ ಮುಖಂಡ ಇಸ್ಮಾಯಿಲಸಾಬ ನಮಾಜಿ ಮಾತನಾಡಿ, 1995 ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೋಹ್ಲಿಯವರು ಮುಸ್ಲೀಂ ಸಮಾಜವು ಹಿಂದೂಳಿದ ಸಮಾಜವೆಂದು 2ಬಿ ಗೆ ಸೇರಿಸಿ 4% ಮೀಸಲಾತಿಯನ್ನು ನೀಡಿದ್ದರು. ಇದಲ್ಲದೇ 2011 ರಲ್ಲಿ ಅಂದಿನ ಕೇಂದ್ರ ಸಕರ್ಾರ ಮುಸ್ಲೀಂ ಸಮಾಜಕ್ಕೆ ಇರುವ 4% ಮೀಸಲಾತಿ ಸಾಕಾವುಗುದಿಲ್ಲವೆಂದು ಅವರಿಗೆ 10% ಕೊಡಬೇಕೆಂದು ಹೇಳಿತ್ತು. ಆದರೆ ಅವುಗಳನ್ನೆಲ್ಲ ಲೆಕ್ಕಿಸದೇ ಪ್ರಸ್ತುತ ಇದ್ದ 4% ಮೀಸಲಾತಿಯನ್ನು ಸಹ ಕಸಿದು ಬೇರೆಯವರಿಗೆ ನೀಡಿರುವುದು ಖೇದಕರ ಸಂಗತಿ. ಹೀಗಾಗಿ ಇನ್ನು ಅವಕಾಶವನ್ನು ಪಡೆದುಕೊಂದು 4% ಮೀಸಲಾತಿಯನ್ನು ಮರಳಿ ಮುಸ್ಲೀಂ ಸಮಾಜಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡ ಹಾಗೂ ಪುರಸಭೆ ಸದಸ್ಯ ರಫೀಕ್ ಮುಲ್ಲಾ ಮಾತನಾಡಿ, ನಮಗೆ ಇರುವ 2ಬಿ ಮೀಸಲಾತಿ ಹಕ್ಕನ್ನು ಕಸಿದುಕೊಂಡು ಅನ್ನರಿಗೆ ಕೊಡುವುದರಿಂದ ನಮ್ಮ ಕೈ ತುತ್ತನ್ನು ಇನ್ನೊಬ್ಬರ ಬಾಯಿಗೆ ಹಾಕಿದಂತಾಗಿದೆ. ಪ್ರತಿಯೊಬ್ಬರೂ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾದರೆ ಪ್ರತಿಭಟನೆ ಮಾಡಿ ಪಡೆಯುವ ಸಂದರ್ಭ ಒದಗಿ ಬಂದಿದೆ. ಸಕರ್ಾರದ ಈ ನೀತಿಯನ್ನು ಖಂಡಿಸುತ್ತೇವೆ. ಮುಂದಿನ ದಿನಮಾನದಲ್ಲಿ ಅವರಿಗೆ ನಮ್ಮ ಸಮಾಜದಿಂದ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಸಮಾಜದ ಮುಖಂಡರಾದ ಸರ್ಪರಾಜ ಹಣಗಿ, ನನ್ನೆಸಾಬ ಖತೀಬ, ಎಂ.ಎಚ್.ತಳಗಡೆ ಮಾತನಾಡಿದರು.

ಈ ಸಂದರ್ಭದಲ್ಲಿ ನಿಸಾರಅಹ್ಮದ ಕೊಪ್ಪಳ, ರಿಯಾಜ ಓಲೇಕಾರ, ಆಸೀಂ ಸರಗಿ, ಆರ್.ಎಂ.ಸೈದರ್, ಎಂ.ಜಿ.ವಡ್ಡಟ್ಟಿ, ಭಾಷುಸಬ ನಾಯ್ಕರ್, ದಾವಲಸಾಬ ಖನರ್ಾಚಿ, ಇಸ್ಮಾಯಿಲ್ ಮುಲ್ಲಾ, ಲಾಡಸಾಬ ಹಾಗೂ ಇತರರು ಇದ್ದರು 

ಸುದ್ದಿ ಓದಿ