ಕಷ್ಟಗಳನ್ನು ಮೆಟ್ಟಿ ನಿಂತಾಗ ಜಯ ಸಿಗಲು ಸಾಧ್ಯ: ಯು.ಶ್ರೀನಿವಾಸ
ಕಷ್ಟಗಳನ್ನು ಮೆಟ್ಟಿ ನಿಂತಾಗ ಜಯ ಸಿಗಲು ಸಾಧ್ಯ: ಯು.ಶ್ರೀನಿವಾಸ
ಕಂಪ್ಲಿ 13: ಪಟ್ಟಣದ ಶುಗರ್ ಫ್ಯಾಕ್ಟರಿಯಲ್ಲಿರುವ ಮುಕ್ತಿ ನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತಿಚಿಗೆ ಸುಗೂರು ಫೌಢ್ರ ಶಾಲೆಯಲ್ಲಿ ಮುಖ್ಯಗುರು ಯು ಶ್ರೀನಿವಾಸ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಕಂಪ್ಲಿಯ ಉಡೇಗೊಳ ಕುಟುಂಬದಿಂದ ನಿವೃತ್ತಿ ಮುಖ್ಯಗುರು ಯು ಶ್ರೀನಿವಾಸ ದಂಪತಿಗಳಿಗೆ ರವಿವಾರ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತಿ ಮು.ಗು ಶ್ರೀನಿವಾಸ ಮಾತನಾಡಿ, ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಜಯ ಸಿಗಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ವೃತ್ತಿ ಜೀವನವನ್ನು ಕಷ್ಟ ಸುಖದ ನಡುವೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ತಮ್ಮದ್ದಾಗಿದೆ. ಜನರ ಪ್ರೀತಿ, ವಿಶ್ವಾಸದಿಂದ ಸರ್ಕಾರಿ ವೃತ್ತಿ ಜೀವನ ಕಳೆದಿರುವೆ.ಕಂಪ್ಲಿಯಲ್ಲಿ ಬಿ.ಎಸ್.ವಿ. ಶಾಲೆ ಮು.ಗು 5ವರ್ಷ ಅನಂತರ ಹುಮುನಾಬಾದ್ ಹಳ್ಳಿಕೇರಿ.ಪ್ರೌಢಶಾಲೆ ಮತ್ತು ಎಮ್ಮಿಗನೂರು .ಪ್ರೌಢಶಾಲೆ. 18ವರ್ಷ ಸೂಗುರು ಪ್ರೌಢ್ರ ಶಾಲೆಯಲ್ಲಿ ಮುಖ್ಯಗುರುಗಳಾಗಿ.13.ವರ್ಷಒಟ್ಟು 33ವರ್ಷ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.ಗಂಗಾಮತ ಸಮಾಜದ ಮುಖಂಡರು ಮತ್ತು ಸಹ ಶಿಕ್ಷಕರು ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಿದರು.ಸಹ ಶಿಕ್ಷಕ ರವಿ ಈ ಸಂದರ್ಭದಲ್ಲಿ ಯು ಹನುಮಂತಪ್ಪ ಉಮಾಕುಟುಂಬ ಬಿ.ಸಿದ್ದಪ್ಪ .ಅಯ್ಯೋದಿ ವೆಂಕಟೇಶ ಈರಣ್ಣ ಉಮೇಶ ಶೈಲಜಾಗೌಡ ಶ್ಯಾಮಸುಂದರ್ ರಾಜ ದಾದಪೀರ ಸೇರಿದಂತ ಇತರರು ಪಾಲ್ಗೊಂಡಿದ್ದರು.