ಅಂತರರಾಷ್ಟ್ರೀಯ

ರಷ್ಯಾಗೆ ಚೀನಾ ಸಹಾಯ ಮಾಡದಂತೆ ಅಮೇರಿಕದ ಎಚ್ಚರಿಕೆ.

ರಷ್ಯಾಗೆ ಚೀನಾ ಸಹಾಯ ಮಾಡದಂತೆ ಅಮೇರಿಕದ ಎಚ್ಚರಿಕೆ.

ನ್ಯೂಯಾರ್ಕ್ 14:  ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ತೀವ್ರ ನಿರ್ಬಂಧ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ಮಿತ್ರರಾಷ್ಟ್ರ ಚೀನಾದ ನೆರವು ಕೋರಿದೆ. ಮಿಲಿಟರಿ ಮತ್ತು ಆರ್ಥಿಕ ಬೆಂಬಲಕ್ಕಾಗಿ ರಷ್ಯಾ ಚೀನಾವನ್ನು ಬೇಡಿಕೊಳ್ಳುತ್ತಿದೆ.ಈ ವಿಚಾರವಾಗಿ ಅಮೆರಿಕ ಎಚ್ಚರಿಕೆ ನೀಡಿದೆ. ಒಂದು ವೇಳೆ ಚೀನಾ ರಷ್ಯಾ ಜೊತೆ ಸಹಕರಿಸಿದರೆ ಆ ದೇಶ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಉಕ್ರೇನ್ ಆಕ್ರಮಣದ ನಂತರ ರಷ್ಯಾ ಚೀನಾದ ಮಿಲಿಟರಿ ಸಹಾಯವನ್ನು ಕೋರಿದೆ ಎಂದು ಹಲವು ಸುದ್ದಿವಾಹಿನಿಗಳು ವರದಿ ಮಾಡಿವೆ. ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯು ಈ ವಿನಂತಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.ಇಂದು ರೋಮ್‌ನಲ್ಲಿ ಅಮೇರಿಕ ಮತ್ತು ಚೀನಾದ ಅಧಿಕಾರಿಗಳ ನಡುವೆ ನಡೆಯುತ್ತಿರುವ ಮಾತುಕತೆಯ ಸಂದರ್ಭದಲ್ಲಿ ಈ ವಿಷಯವು ನಿರ್ಣಾಯಕವಾಗಿದೆ. ವಾಸ್ತವವಾಗಿ, ಉಕ್ರೇನ್ ಆಕ್ರಮಣದ ಆರಂಭದಿಂದಲೂ ಚೀನಾ ರಷ್ಯಾವನ್ನು ಬೆಂಬಲಿಸುತ್ತಿದೆ. ಆದರೆ ಡ್ರ್ಯಾಗನ್ ದೇಶವು ಮಿಲಿಟರಿ ಅಥವಾ ಹಣಕಾಸಿನ ನೆರವು ನೀಡಿಲ್ಲ ಎಂದು ವರದಿಯಾಗಿದೆ. ರಷ್ಯಾವು ಚೀನಾದೇಶವನ್ನ ಡ್ರೋನ್‌ಗಳನ್ನು ನೀಡುವಂತೆ ಕೋರಿದೆ ಎಂದು ತಿಳಿದು ಬಂದಿದೆ.

ಸುದ್ದಿ ಓದಿ