ಅಂತರರಾಷ್ಟ್ರೀಯ

ನವಂಬರ್ ೩ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ

ನವಂಬರ್ ೩ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ

ವಾಷಿಂಗ್ಟನ್, ಆಗಸ್ಟ್ 3: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನವಂಬರ್ ೩ ರಂದು ನಡೆಯಲಿದೆ ಎಂದು  ವೈಟ್  ಹೌಸ್   ಚೀಫ್ ಆಫ್  ಸ್ಟಾಫ್ ಮಾರ್ಕ್  ಮೆಡೋಸ್  ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ  ಡೋನಾಲ್ಡ್ ಟ್ರಂಪ್  ಅವರು,   ಮೇಲ್ ?ಇನ್ ಓಟಿಂಗ್( ಮನೆಯಿಂದಲೇ ಮತಚಲಾಯಿಸುವುದು) ಮೂಲಕ   ಮತದಾನ ಪ್ರಕ್ರಿಯೆಯಲ್ಲಿ  ವಂಚನೆ ನಡೆಯುವ ಅವಕಾಶವಿದ್ದು, ಹಾಗಾಗಿ ಚುನಾವಣೆಯನ್ನು ಮುಂದೂಡಬೇಕೆಂದು  ಸಲಹೆ ನೀಡಿದ್ದರು.

ಆದರೆ,  ಟ್ರಂಪ್ ಅವರ ಸಲಹೆಯನ್ನು  ಎದುರಾಳಿ  ಡೆಮಾಕ್ರಟಿಕ್  ಪಕ್ಷದೊಂದಿಗೆ   ಸ್ವಂತ ಪಕ್ಷದ ನಾಯಕರು  ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಟ್ರಂಪ್  ಚುನಾವಣಾ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಮಾರ್ಕ್  ಮೆಡೋಸ್  ತಳ್ಳಿಹಾಕಿದ್ದಾರೆ.

ಮೇಲ್ ?ಇನ್ ಓಟಿಂಗ್ ಮೂಲಕ  ಫಲಿತಾಂಶ  ವಿಳಂಬವಾಗಿ ಬರುವ ಅವಕಾಶವಿದೆ  ಎಂಬ ಕಳವಳವನ್ನು   ಮಾತ್ರ  ಟ್ರಂಪ್  ವ್ಯಕ್ತಪಡಿಸಿದ್ದಾರೆ.  ಅದನ್ನು ಹೊರತುಪಡಿಸಿದರೆ  ಚುನಾವಣೆ  ಮುಂದೂಡಬೇಕು ಎಂಬ ಯಾವುದೇ ಪ್ರಯತ್ನಗಳನ್ನು ನೆಡೆಸಿಲ್ಲ.  ಅಮೆರಿಕಾ ಅಧ್ಯಕ್ಷೀಯ  ಚುನಾವಣೆ ನವಂಬರ್ ೩ರಂದು ನಡೆಯಲಿವೆ ಎಂದು  ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ  ಸ್ಥಾನಕ್ಕೆ ರಿಪಬ್ಲಿಕ್ ಪಕ್ಷದಿಂದ  ಟ್ರಂಪ್  ಕಣದಲ್ಲಿದಲ್ಲಿದ್ದರೆ, ಡೆಮಾಕ್ರಟಿಕ್ ಪಕ್ಷದಿಂದ ಜೋ ಬಿಡೆನ್  ಸ್ಪರ್ಧಿಸಲಿದ್ದಾರೆ. ಅಮೆರಿಕಾ ಅಧ್ಯಕ್ಷೀಯ  ಚುನಾವಣೆಯ ದಿನಾಂಕವನ್ನು ಬದಲಿಸುವ ಅಥವಾ ಮುಂದೂಡುವ ಅಧಿಕಾರ ಕೇವಲ ಅಮೆರಿಕಾ ಕಾಂಗ್ರೆಸ್ ಮಾತ್ರ ಹೊಂದಿದ್ದು, ಈ ವಿಷಯದಲ್ಲಿ  ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ  ಎಂದು  ಅವರು ತಿಳಿಸಿದ್ದಾರೆ.


ಸುದ್ದಿ ಓದಿ