ಜಾರ್ಜಿಯಾ,ಕೊಸೊವೊ ದೇಶಗಳಿಗೆ ತೆರಳಬೇಡಿ, ನಾಗರೀಕರಿಗೆ ಅಮೆರಿಕಾ ಸಲಹೆ
ವಾಷಿಂಗ್ಟನ್, ಡಿ15: ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಮೆರಿಕಾ, ತನ್ನ ನಾಗರಿಕರಿಗೆ ಹೊಸ ಪ್ರಯಾಣ ಆರೋಗ್ಯ ಎಚ್ಚರಿಕೆಗಳನ್ನು ಜಾರಿ ಮಾಡಿದೆ. ಜಾರ್ಜಿಯಾ, ಕೊಸೊವೊ ದೇಶಗಳಿಗೆ ಭೇಟಿ ನೀಡದಂತೆ ಅಮರಿಕಾ ತನ್ನ ನಾಗರಿಕರಿಗೆ ಪ್ರಯಾಣ ಎಚ್ಚರಿಕೆ ನೀಡಿದೆ. ಜಾರ್ಜಿಯಾ ಹಾಗೂ ಕೊಸೊವೊ ದೇಶಗಳಲ್ಲಿ ಕೊರೊನಾ ಸಾಂಕ್ರಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆ ದೇಶಗಳಿಗೆ ಭೇಟಿ ನೀಡಬಾರದು ಎಂದು ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ವಿವಿಧ ದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಯಾಣ ನೋಟಿಸ್ ನೀಡಿದೆ.