ರಾಣೆಬೆನ್ನೂರಲ್ಲಿ ಜೀವಂತ "ರತಿ-ಕಾಮ" ನೋಡಲು ಬಂದವರು ಸಾವಿರ, ಸಾವಿರಾರು... ನಗಿಸಲು ಪ್ರಯತ್ನಿಸಿ ವಿಫಲರಾದವರೂ ನೂರಾರೂ...
ರಾಣೇಬೆನ್ನೂರು:4 ಹಾವೇರಿ ಜಿಲ್ಲೆಯ ವಾಣಿಜ್ಯ ನಗರದ ಬಹು ವಿಧ ಸಾಂಸ್ಕೃತಿಕ ಕೇಂದ್ರ ಸ್ಥಾನವಾದ ದೊಡ್ಡ ಪೇಟೆಯ, ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ಜೀವಂತ "ರತಿ -ಕಾಮ" ಉತ್ಸವ ಸಮಿತಿಯು ತನ್ನ 67ನೇ ವಾರ್ಷಿಕೋತ್ಸವದಲ್ಲಿ, ಮಂಗಳವಾರ ಸಂಜೆಜೀವಂತ "ರತಿ- ಕಾಮ" ಪ್ರತಿಷ್ಠಾಪಿಸಲಾಗಿತ್ತು. ಮಾಜಿ ಶಾಸಕ ಅರುಣ ಕುಮಾರಪೂಜಾರ, ಸಂತೋಷ್ ಪಾಟೀಲ, ಭಾರತಿ ಜಂಬಿಗಿ, ಡಿ. ವೈ. ಎಸ್.ಪಿ. ಲೋಕೇಶ್ ಜೆ. ಎನ್, ಮತ್ತು ಸಿಪಿಐ ಪಿಎಸ್ಐ ಹಾಗೂ ಪುರ ಜನರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇಂದು ಸಂಜೆಯಿಂದಲೇ ನಗರದ ಮತ್ತು ತಾಲೂಕಿನ ಜನರು ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರತಿ ವರ್ಷವೂ, ಹೋಳಿ ಹುಣ್ಣಿಮೆ ಬಣ್ಣದೂಕು ಳಿಯ ಮುನ್ನಾದಿನ ಸಮಿತಿಯು ಆಯೋಜಿಸಲ್ಪಡುವ ಈ ಜೀವಂತ " ರತಿ ಕಾಮ" ರನ್ನು ನೋಡಬೇಕು,
ಮಾತಾಡಿಸಬೇಕು, ನಗಿಸಬೇಕು... ನಗಿಸಲೇಬೇಕು... ಆದರೇ.. ನಗಿಸಿದ್ದಾರೆಯೇ.. ಇಲ್ಲ.!! ಸಾಧ್ಯವೇ ಆಗಿಲ್ಲ.!?. ಮಂಗಳವಾರ ಸಂಜೆ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು,ಪೂಜೆ ಸಲ್ಲಿಸಿ, ಸಾರ್ವಜನಿಕರ ದರ್ಶನಕ್ಕಾಗಿ ನಿರ್ಮಿಸಲಾದ ಅಲಂಕಾರಿಕ ರಂಗ ಸಜ್ಜಿಗೆಯಲ್ಲಿ ಅಟ್ಟವೇರಿದ "ಕುಮಾರ ಹಡಪದ" ಮತ್ತು "ಗದಿಗೆಪ್ಪ ರೂಡ್ಡನವರ " ಅವರು ಎಂದಿನಂತೆ ಜೀವಂತ ರೂಪಕದಲ್ಲಿ ಸಂಭ್ರಮಿಸಿ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾದರು. ರಾಣೇಬೆನ್ನೂರು ನಗರದ ದೊಡ್ಡ ಪೇಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜನವೂ.. ಜನ. ನಗಿಸಲು ಯಾವುದೇ ಜಾತಿ,ಮತ, ಭೇದ, ಭಾವ, ಗಂಡು ಹೆಣ್ಣು, ಮಕ್ಕಳು ಎನ್ನುವ ನಿರ್ಬಂಧ ಇಲ್ಲಿ ಇರಲಿಲ್ಲ. ಕಳೆದ 27 ವರ್ಷಗಳಿಂದ "ರತಿ- ಕಾಮ" ಮನ್ಮಥ ರಂತಹ ಈ ಜೋಡಿ ಇಂದಿಗೂ ತಮ್ಮ ಕಾಯಕ ಮಾಡುತ್ತಿದ್ದಾರೆ.
ಇದೆಲ್ಲವೂ, ದೇವರ ಕೃಪೆ ಎಂದು ನಂಮ್ರವಾಗಿ ನುಡಿಯುತ್ತಾರೆ... ರೂಪಕದ ನಿಗದಿತ ಅವಧಿ ರಾತ್ರಿ 12 ಗಂಟೆ ಅಂತಿಮವಾಗಿದ್ದರೂ, ಮಧ್ಯರಾತ್ರಿಯಾದರೂ ದೂರದೂರುಗಳಿಂದ ಜನರು ತಂಡೋಪ ತಂಡವಾಗಿ ಬರುತ್ತಿರುವುದರಿಂದ ಸಮಿತಿಯು ಯಾರನ್ನು ನಿರಾಸೆಗೊಳಿಸದೇ, ಮಧ್ಯರಾತ್ರಿವರೆಗೂ ಮುಂದುವರೆಸಿದ್ದರು. ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಸಮಿತಿಯು ಕರ್ತವ್ಯ ನಿಭಾಯಿಸುವಲ್ಲಿ ಯಶಸ್ವಿ ಕಂಡರು. ಮುಂಚೂಣಿಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಅನಿಲಕುಮಾರ ಸಿದ್ದಾಳಿ, ಮುಖಂಡರಾದ ಅಜಯ್ ಜಂಬಗಿ, ಸಿದ್ದಣ್ಣ ಚಿಕ್ಕಬಿದರಿ, ಬಸವರಾಜ ರೊಡ್ಡನವರ, ಯುವರಾಜ್ ಬಾರಾಟಕ್ಕಿ, ಪ್ರಭುಸ್ವಾಮಿ ಕರ್ಜಿಗಿಮಠ,
ಎ. ಬಿ. ಪಾಟೀಲ್, ಮಲ್ಲಿಕಾರ್ಜುನ ಪೂಜಾರ,ಕೊಟ್ರೇಶ್ ಕೆಂಚಪ್ಪನವರ, ಶಿವಕುಮಾರ ಹರಕನಾಳು, ನಾಗರಾಜ ಹರಿಹರ, ಶಂಬಣ್ಣ ಕಟಗಿಹಳ್ಳಿಮಠ, ಅರುಣ ಗುತ್ತಲ್ಲ, ನಾಗರಾಜ ಹರಿಹರ, ಮಂಜುನಾಥ ಕೆರೋಡಿ, ಚಂದ್ರಣ್ಣ ರೋಡ್ಡನವರ ಬಸವರಾಜ ಮಜ್ಜಗಿ, ಬಸವರಾಜ ತಾವರಗೊಂದಿ, ಗಣೇಶ ಬೇತೂರು, ನಿಂಗರಾಜ ನವಲೆ ಮತ್ತಿತರರು ಪಾಲ್ಗೊಂಡಿದ್ದರು. ತಾಲೂಕು ನಗರ ಜಿಲ್ಲೆ ಮತ್ತು ನಾಡಿನ ವಿವಿಧ ಜಿಲ್ಲೆಗಳ ನಾಗರಿಕರು ಭಾಗವಹಿಸಿ, ನಗಿಸಲು ತಮ್ಮ ಪ್ರಯತ್ನ ನಿರಂತರವಾಗಿ ನಡೆಸಿದ್ದರಾದರೂ, ನಗಿಸಲು ವಿಫಲರಾಗಿ ಬರೋಬ್ಬರಿ 13 ಲಕ್ಷ ರೂಪಾಯಿಗಳು ಬಹುಮಾನ ಘೋಷಿಸಿದವರಿಗೆ ಉಳಿದಂತಾಯಿತು. ನಗಿಸಲು ಪ್ರಯತ್ನ ಪಟ್ಟವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೆಚ್ಚು ಮೊರೆ ಹಾಕಿಕೊಂಡು ಸಾಗುತ್ತಿರುವುದು ಕಂಡುಬಂದಿತು.