ಕುಟುಂಬದ ಉಳಿವು ಮಾನವ ಕುಲದ ಭವಿತವ್ಯ ಸ್ತ್ರೀ ಕೈಯಲ್ಲಿದೆ

ಕುಟುಂಬದ ಉಳಿವು ಮಾನವ ಕುಲದ ಭವಿತವ್ಯ ಸ್ತ್ರೀ ಕೈಯಲ್ಲಿದೆ The survival of the family, the future of humanity, is in the hands of women


      ಹಾವೇರಿ 09 :ನಾರಿ ಇಲ್ಲದ ಮನೆಯನ್ನು ಊಹಿಸಲು ಅಸಾಧ್ಯ. ಕುಟುಂಬದ ಉಳಿವು ಮಾನವ ಕುಲದ ಭವಿತವ್ಯ ಸ್ತ್ರೀ ಕೈಯಲ್ಲಿದೆ ಎಂದು ವಾರ್ಡನ್ ಬಿ. ಭಾಗ್ಯಜ್ಯೋತಿ ಹೇಳಿದರು.  ಡಾ. ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸಭಾಭವನದಲ್ಲಿ ತಾಯಿ ಸೇವಾ ಫೌಂಡೇಶನ್ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

       ತ್ಯಾಗ, ನಿಸ್ವಾರ್ಥ, ಸಹನೆ, ಕಷ್ಟ ಸಹಿಷ್ಣತೆಯ ಅಪರವತಾರವೇ ಸ್ತ್ರೀ ಮಹಿಳೆಯರು ಕೆಲಸ ಮಾಡುವ ಸ್ಥಳ, ಕ್ಷೇತ್ರಗಳು ಸುರಕ್ಷಿತವಾಗಿರಬೇಕು, ಎಲ್ಲ ಕಡೆ ವ್ಯಾಪಕವಾಗುತ್ತಿರುವ ಲೈಂಗಿಕ ಶೋಷಣೆ ಮಹಿಳೆಯರ ಅಭಿವೃದ್ಧಿಗೆ ತೀವ್ರ ಕಂಠಕವಾಗಿದೆ.ಎಲ್ಲ ಕಡೆ ವ್ಯಾಪಕವಾಗುತ್ತಿರುವ ಲೈಂಗಿಕ ಶೋಷಣೆ ಮಹಿಳೆಯರ ಅಭಿವೃದ್ಧಿಗೆ ತೀವ್ರ ಕಂಠಕವಾಗಿದೆ ಹೆಣ್ಣಿಲ್ಲದ ಮನೆಯೆಂದರೆ ನೀರಿಲ್ಲದ ಬಾವಿಯಂತೆ ನೀರು ಹೇಗೆ ಜೀವನದಾರವೋಹೆಣ್ಣು ಸುಖೀ ಕುಟುಂಬದ ಆಧಾರ, ಸುಖ-ಶಾಂತಿ, ಸಮಾಧಾನ ಇದು ಮನೆಯಲ್ಲಿ ಎಲ್ಲ ಕಾರ್ಯಗಳು ಸುಲಲಿತವಾಗಿ. ಸುವ್ಯವಸ್ಥಿತವಾಗಿ ಸಾಗುತ್ತಿದೆ ಅಂದರೆ ಆ ಮನೆಯಲ್ಲಿ ಚಂದವಾದ ಮನಸ್ಸಿನ ಭಾವನೆಗೆ ಸ್ಪಂದಿಸುವ ಹೆಣ್ಣು ಇದ್ದೇ ಇದ್ದಾಳೆ ಅಂತಲೇ ಅರ್ಥ ಎಂದು ಎಂದು ಭಾಗ್ಯಜ್ಯೋತಿ ತಿಳಿಸಿ ಫೌಂಡೇಶನ್ ಸೇವಾ ಕಾರ್ಯವನ್ನು ಶ್ಲಾಗಿಸಿದರು. 

      ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಒಂದು ಹೆಣ್ಣು ಮಗು 10 ಗಂಡು ಮಕ್ಕಳಿಗೆ ಸಮಾನ ಎನಿಸಿದ್ದು, ಒಲಿದರೆ ತಾಯಿಯಾಗಿ ಅನಿವಾರ್ಯ ಸ್ಥಿತಿ ಬಂದರೆ ಕಾಳಿ ಮಾತೆಯಾಗಿ ಆಪತ್ತು ಎದುರಿಸುವ ಶಕ್ತಿಯನ್ನು ಹೊಂದಿದ್ದಾಳೆ. ಅವಳ ಹಕ್ಕುಗಳಿಗೆ ಹಾಗೂ ಕನಸುಗಳಿಗೆ ನಿರಂತರ ಬೆಂಬಲ ನೀಡಿದರೆ ಮಾತ್ರ ಆಧುನಿಕ ಮಹಿಳೆ ಸವಾಲುಗಳನ್ನು ಎದುರಿಸಬಲ್ಲ ಸಬಲೆಯಾಗಲು ಸಾಧ್ಯ, ಸ್ತ್ರೀ ಶಕ್ತಿ ಅಣು ಶಕ್ತಿಗಿಂತ ಶಕ್ತಿಶಾಲಿ ಆಕೆ ಯಾರಿಗೂ ಭಾರವಲ್ಲ,ಆದರೆ ಆಕೆ ಎಲ್ಲರಿಗೂ ಆಧಾರ.ಮಹಿಳೆಯರನ್ನು ನೋಡುವ ದೃಷ್ಟಿಕೋನವು ಬದಲಾಗಬೇಕು ಎಂದರು. 

 ಫೌಂಡೇಶನ್ ಉಪಾಧ್ಯಕ್ಷೆ ಸುವೇದ ಲಕ್ಷಿ-್ಮಪತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಿಳೆ ಅಂದು-ಇಂದು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಪನಾ ಪೂಜಾರ್, ಪೂಜಾ ಏರಿಮನಿ, ಶ್ರುತಿ ಲಮಾಣಿ ಹಾಗೂ ನಂದಿನಿ ಎಸ್‌. ಹೆಚ್‌. ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶಿವಲೀಲಾ ಸೋಮಕ್ಕನವರ್, ಚಿನ್ನಮ್ಮ ಅರ್ಚಕ್, ಮಂಜುಳಾ ಭಜಂತ್ರಿ, ಸುಜಾತ ಮಾಗಳ್, ನೀಲಮ್ಮ ಅರ್ಚಕ್, ಲೋಕ್ಷ ಹಾಗೂ ಸಾತ್ವಿಕ್ ರಾಕೇಶ  ಇದ್ದರು.   ಆಶ್ರಮದ ಚಿಣ್ಣರು ಸೇರಿದಂತೆ ವಸತಿ ನಿಲಯದ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಶ್ವೇತಾ ಹರಿಜನ್, ಧನ್ಯ ಕುಮಾರಿ ಮಾಯಪ್ಪನವರ್ ಪ್ರಾರ್ಥಿಸಿದರು, ವಿಶ್ರುತ್ ಎಲ್‌.ಜಿ, ನಿರೂಪಿಸಿದರು. ಪೂಜಾ ವಂದಿಸಿದರು.