ಮುಂದಗೋಡ

ಉ.ಕ ಜಿಲ್ಲಾ ಚಾಲಕರ ಒಕ್ಕೂಟದ ಪದಾಧಿಕಾರಿಗಳಿಗೆ ವಿಶೇಷ ಸನ್ಮಾನ

ಉ.ಕ ಜಿಲ್ಲಾ ಚಾಲಕರ ಒಕ್ಕೂಟದ ಪದಾಧಿಕಾರಿಗಳಿಗೆ ವಿಶೇಷ ಸನ್ಮಾನ

 ಮುಂಡಗೋಡ 02 : ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ಚಾಲಕರ ಒಕ್ಕೂಟ (ರಿ.) ಎಲ್ಲಾ ಪದಾಧಿಕಾರಿಗಳಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನವೆಂಬರ್30 2025 ರವಿವಾರ ಬೆಂಗಳೂರುನಲ್ಲಿ ರಾಜ್ಯಾಧ್ಯಕ್ಷರಾದ ಜಿ,ನಾರಾಯಣ ಸ್ವಾಮಿ ಅಣ್ಣನವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆ ಎಲ್ಲಾ ಪದಾಧಿಕಾರಿಗಳಿಗೆ ಗೌರವಿತವಾಗಿ ಸನ್ಮಾನಿಸಲಾಯಿತು. ಈ  ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು  ಮುನ್ನಾ ಗಣೇಶಪುರ,ಉಪಾಧ್ಯಕ್ಷರು ಅಶೋಕ ಅಂಬಿಗ, ಸಂಚಾಲಕರು ಲಿಂಗರಾಜ ಖನ್ನೂರ ಮುಂಡಗೋಡ, ತಾಲೂಕು ಅಧ್ಯಕ್ಷರು ಸಲೀಮ್ ಶೇಖ್, ಕಾರ್ಯದರ್ಶಿ ಉದಯ ಗೊಂದಳೆ, ಹಾಗೂ ಪದಾಧಿಕಾರಿಗಳು. ಹಳಿಯಾಳ ತಾಲೂಕು ಅಧ್ಯಕ್ಷರು ಬಸವರಾಜ ಗೌಳಿ, ಹಾಗೂ ಪದಾಧಿಕಾರಿಗಳು , ಅಂಕೋಲಾ ತಾಲೂಕು ಅಧ್ಯಕ್ಷರು ಪ್ರವೀಣ್ ನಾಯ್ಕ್‌, ಹಾಗೂ ಪದಾಧಿಕಾರಿಗಳು. ಜೋಯಿಡಾ ತಾಲೂಕು ಅಧ್ಯಕ್ಷರು ಪ್ರಶಾಂತ ಠಾಣೆಕರ, ಹಾಗೂ ಪದಾಧಿಕಾರಿಗಳು ಯಲ್ಲಾಪುರ ತಾಲೂಕು ಅಧ್ಯಕ್ಷರು ಇರ್ಫಾನ್ ಹಾಗೂ ಪದಾಧಿಕಾರಿಗಳು ಎಲ್ಲಾ ತಾಲೂಕು ಚಾಲಕ ಮಿತ್ರರು ಹಾಗೂ ಉಪಸ್ಥಿತರಿದ್ದರು. 


ಸುದ್ದಿ ಓದಿ