ಮುಂದಗೋಡ

ಮಕ್ಕಳಿಗೆ ದಾಸ ಸಾಹಿತ್ಯ ಪರಿಚಯ ಮಾಡಿಕೊಟ್ಟಾಗ ಮಾತ್ರ ದಾಸ ಸಾಹಿತ್ಯ ಉಳಿಯಲು ಸಾಧ್ಯ

ಮಕ್ಕಳಿಗೆ ದಾಸ ಸಾಹಿತ್ಯ ಪರಿಚಯ ಮಾಡಿಕೊಟ್ಟಾಗ ಮಾತ್ರ ದಾಸ ಸಾಹಿತ್ಯ ಉಳಿಯಲು ಸಾಧ್ಯ

 ಮುಂಡಗೋಡ 26: ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ವತಿಯಿಂದ “ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ” ಕಾರ್ಯಕ್ರಮದಲ್ಲಿ ‘ದಾಸ ಸಾಹಿತ್ಯ ಉಪನ್ಯಾಸ’ ಹಾಗೂ ಸಂವಾದ ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುಭಾಸ ಡೋರಿ ರವರು ಉದ್ಘಾಟನೆ ಮಾಡಿ ಮಾತನಾಡುತ್ತಾ ಮಕ್ಕಳಿಗೆ ದಾಸ ಸಾಹಿತ್ಯ ಪರಿಚಯ ಮಾಡಿಕೊಡಬೇಕು ಅಂದಾಗ ಮಾತ್ರ ದಾಸ ಸಾಹಿತ್ಯ ಉಳಿಯಲು ಸಾಧ್ಯ. ಹಲವಾರು ರಾಜರು ಕಾಲದಲ್ಲಿ ದಾಸ ಸಾಹಿತ್ಯ ಬೆಳೆಸಲು ಬಹಳ ಪ್ರಯತ್ನದಿಂದ ದಾಸ ಸಾಹಿತ್ಯ ಬೆಳೆಸಿದ್ದಾರೆ. ದಾಸ ಸಾಹಿತ್ಯ ಅತ್ಯಂತ ಹಳೆಯ ಸಾಹಿತ್ಯವಾಗಿದ್ದು ಕನಕದಾಸರು, ಪುರಂದರದಾಸರ ಸಾಹಿತ್ಯ ಪ್ರತಿಯೊಬ್ಬರು ಅನುಕರಣಿ ಮಾಡುವುದು ಆಗಬೇಕು. ಇಂದಿನ ದಿನಗಳಲ್ಲಿ ಅಳವಡಿಕೆ ಮಾಡುವುದು ಅತ್ಯವಶ್ಯಕವಾಗಿದೆ. ಇಂದು ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಾಸ ಸಾಹಿತ್ಯ ಉಳಿಯಲು ಒಂದು ಉತ್ತಮ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು.  

ಸಾಹಿತಿಗಳು ಹಾಗೂ ಮುಖ್ಯ ಶಿಕ್ಷಕರಾದ ವಾಸುದೇವ ಮಡ್ಲಿಯವರು ದಾಸ ಸಾಹಿತ್ಯ ಕುರಿತು ಉಪನ್ಯಾಸ ಮಾಡುತ್ತಾ ದಾಸ ಸಾಹಿತ್ಯವು ಸುಮಾರು ವರ್ಷಗಳಿಂದ ರಾಜರ ಸಮಯದಲ್ಲಿ ಮೇಲಮಟ್ಟಿದಲ್ಲಿ ಇತ್ತು.ದಾಸ ಸಾಹಿತ್ಯದ  ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಮತ್ತು ಇಂದಿನ ದಿನಗಳಲ್ಲಿ ದಾಸ ಸಾಹಿತ್ಯ ಅಳಿವಿನ ಅಂಚಿನಲ್ಲಿದೆ. ಇದರ ಕುರಿತು ನಾವೆಲ್ಲರೂ ನಮ್ಮ ಮಕ್ಕಳಿಗೆ ದಾಸ ಸಾಹಿತ್ಯ ಬಗ್ಗೆ ತಿಳಿಸಬೇಕು ಎಂದರು. ಮುಖ್ಯ ಅತಿಥಿಗಳಾದ  ಶ್ಯಾಮಲಾ ನಾಯ್ಕ ರವರು ಮಾತನಾಡುತ್ತಾ ಇಂದು ನಾವು ಕನ್ನಡ ಉಳಿಸಿದರೆ ದಾಸ ಸಾಹಿತ್ಯ ಬೆಳೆಸಲು ಸಾಧ್ಯ ಮೊದಲು ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಲು ಉಪಯುಕ್ತವಾಗುತ್ತದೆ. ನಾನು ಕನ್ನಡದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ನಮ್ಮತಾಯಿ ಇದ್ದಂತೆ ತಾಯಿಗೆ ಗೌರವ ನೀಡಬೇಕು  ಹಾಗಾಗಿ  ನಾವೆಲ್ಲರೂ ಕನ್ನಡವನ್ನು ಪ್ರೀತಿಸಬೇಕು ಮತ್ತು ನನ್ನದು ಎನ್ನುವ ಭಾವನೆ ಬೆಳಿಸಿ ಇದರ ಉಳಿವಿಗಾಗಿ ಶ್ರಮಿಸಬೇಕು ಎಂದು ಹೇಳಿದರು.  

ರಾಜು ನದಾಫರವರು ಮಾತನಾಡುತ್ತ ಕನ್ನಡ ನಮ್ಮೆಲ್ಲರ ಅಶ್ಮಿತೆಯ ಪ್ರತೀಕ ಕನ್ನಡವನ್ನು ಏತ್ತರ ಮಟ್ಟದಲ್ಲಿ ಬೆಳೆಸುವ ಅನಿವಾರ್ಯತೆ ಇದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ  ವಸಂತ ಕೊಣಸಾಲಿಯವರು  ಮಾತನಾಡುತ್ತ ಇಂದು ಕನ್ನಡ ಕಾರ್ತಿಕದ ಅಂಗವಾಗಿ ಅನುದಿನ ಅನು ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ದಾಸ ಸಾಹಿತ್ಯ ಉಪನ್ಯಾಸ ಹಾಗೂ ಸಂವಾದ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಏರಿ​‍್ಡಸಿದ್ದೇವೆ. ಪ್ರತಿವರ್ಷ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದು, ದಾಸ ಸಾಹಿತ್ಯವು ಅತ್ಯಂತ ಹಳೆಯ ಹಾಗೂ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹುದೊಡ್ಡ ಪತ್ರ ವಹಿಸಿದೆ. ಇಂತಹ ಗಟ್ಟಿತನದ ಸಾಹಿತ್ಯವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  

ಈ ಕಾರ್ಯಕ್ರಮದಲ್ಲಿ ಚಲುವ ಕನ್ನಡ ನಾಡು ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ  ಇಕ್ರಾ ಇಬ್ರಾಹಿಮ್ ಶೇಖ ದ್ವಿತೀಯ ಸ್ಥಾನ ಪಡೆದ ಯಶಸ್ವಿ. ಎಲ್‌. ಎಸ್‌. ತೃತೀಯ ಸ್ಥಾನ ಪಡೆದ ಸಮೃದ್ಧಿ ಕುಲಕರ್ಣಿ, ಹಾಗೂ ವರ​‍್ರಸಾದ. ಪವಾರ, ಸಮಾಧಾನಕರ ಬಹುಮಾನ ವೈಷ್ಣವಿ. ದೈವಜ್ಞ, ಮಧುರಾ, ಬಿರಾದಾರ್, ರಿದಾ. ರಾಜು. ನದಾಫ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು ಎಸ್‌. ಸಿ. ಬಸನಗೌಡ್ರ, ಸಂಗಪ್ಪ. ಕುಳೂರು, ಎಸ್‌. ಬಿ. ಹೂಗಾರ,  ಆರ್‌. ಎಸ್‌. ಕಲಾಲ, ಡಾ. ಅನುಪಮಾ. ಅದಾಪುರ, ಗೌರಮ್ಮ. ಕೊಳ್ಳನವರ, ಆನಂದ. ಹೊಸೂರು, ಬಾಲಚಂದ್ರ. ಹೆಗಡೆ, ರಾಜಶೇಖರ. ನಾಯ್ಕ, ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಎಸ್‌. ಡಿ ಮುಡೆಣ್ಣವರ ಸ್ವಾಗತಿಸಿದರು, ನಾಗರಾಜ್‌. ಅರ್ಕಸಾಲಿ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವಿನಾಯಕ. ಶೇಟ್ ನಡೆಸಿಕೊಟ್ಟರು. 


ಸುದ್ದಿ ಓದಿ