ಬುದ್ನಿಪಿ.ಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಗ್ರಂಥಾಲಯ ಕೊಠಡಿಗೆ ಸವದಿ ಭೂಮಿ ಪೂಜೆ
ಮಹಾಲಿಂಗಪುರ 01 ; ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಗ್ರಂಥಾಲಯಗಳು ಇರಬೇಕು ಇದರಿಂದ ವಿದ್ಯಾರ್ಥಿಗಳ ಹೆಚ್ಚಿನ ಓದಿಗೆ ಅನುಕೂಲವಾಗಲಿದೆ ಎಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. ಸ್ಥಳೀಯ ಪಿ.ಡಿ ಬುದ್ನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟ, ಮುಧೋಳ ಪಂಚಯತ ರಾಜ ಇಂಜೀನಿಯರಿಂಗ ಉಪವಿಭಾಗ 2024-25 ನೇ ಸಾಲೀನ ಪಿ.ಎಂ.ಶ್ರೀ ಶಾಲೆಗಳಿಗೆ ಬಿಡುಗಡೆಯಾದ ಅನುದಾನದಡಿಯಲ್ಲಿ 20 ಲಕ್ಷ 70 ಸಾವೀರ ಅಂದಾಜು ವೆಚ್ಚದಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಗ್ರಂಥಾಲಯದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳಿಗೆ ಬಿಡುವು ಸಿಕ್ಕಾಗ ಪಠ್ಯದ ಜೋತೆಗೆ ಇನ್ನೂ ಹಲವಾರು ವಿಷಯಗಳನ್ನು ಓದಿ ತಿಳಿದುಕೊಳ್ಳಲು ಹಾಗೂ ಅನೇಕ ಹೋರಾಟಗಾರರ ವಿಷಯದ ಕುರಿತು, ಕವನಗಳನ್ನು ಓದಲು ಇದು ಅನುಕುಲವಾಗಿದೆ. ಕಾರಣ ವಿದ್ಯಾರ್ಥಿಗಳ ಸರ್ಕಾರದ ಈ ಮಹತ್ತರವಾದ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಯ ಕೆ.ಎಸ್ ಹಿರೇಮಠ ಮತ್ತು ಸಿಬ್ಬಂದಿ ಸೇರಿ ಶಾಸಕರನ್ನು ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ ಶೇಖರ ಅಂಗಡಿ,ಈರ್ಪ ದಿನ್ನಿಮನಿ, ಡಾ ಅಶೋಕ ದಿನ್ನಿಮನಿ, ಚನಬಸು ಯರಗಟ್ಟಿ, ವಿಷ್ಣುಗೌಡ ಪಾಟೀಲ, ಸಾಗರ ಮಠದ, ಮಲ್ಲು ದಲಾಲ,ಶಿವನಗೌಡ ಪಾಟೀಲ, ಶಿವಬಸು ಗೌಂಡಿ,ಜಿ.ಆರ್. ಪಾಟೀಲ, ಎಸ್.ಬಿ ವಿರಕ್ತಮಠ, ಎಸ್.ಜಿ ಪೂಜಾರಿ, ಪ್ರಶಾಂತ ಮುಖ್ಯನ್ನವರ, ಬಸವರಾಜ ಮಡಿವಾಳ, ಹರೀಷ ನಾಯಕ, ಮಹೇಶ ಮುಕುಂದ, ಗುರು ಅಂಬಿ, ಮಹಾಲಿಂಗ ಬುದ್ನಿ ಸೇರಿದಂತೆ ಹಲವರು ಇದ್ದರು.