ಸಂಧ್ಯಾ ಕಾಂಬಳೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಆಯ್ಕೆ
ಮುದ್ದೇಬಿಹಾಳ 07: ತಾಲೂಕಿನ ಕೋಳೂರು ಗ್ರಾಮ ಸರಕಾರಿ ಪ್ರೌಢ ಶಾಲೆ ವಿಜ್ಞಾನ ವಿಭಾಗದ ಸಹ ಶಿಕ್ಷಕಿ ಸಂಧ್ಯಾ ಕಾಂಬಳೆ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಮುಖಿ ಸೇವೇ ಸಲ್ಲಿಸಿ ಸಮಾನತೆ ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಅಡಿಯಲ್ಲಿ ಕರ್ನಾಟಕ ಜ್ಞಾನ ಮತ್ತು ವಿಜ್ಞಾನ ಸಮೀತಿ (ರಿ) ಬೆಂಗಳೂರ ಇದರ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಶಿಕ್ಷಣ ಕ್ರಾಂತಿ ಕಾರ್ತಿ ಸಾವೀತ್ರಿಬಾಯಿ ಪುಲೆಯ ಸ್ಮರಣಾರ್ಥ ರಾಜ್ಯಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ದಿ, 8 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರ ಜಿಲ್ಲೆ ತಿಡಗುಂದಿ ಕಾಯಕ ಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೇಯ ಮಾನಸ ಗಂಗೋತ್ರಿ ಮಾದರಿಯ ವಸತಿ ಶಾಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕಾರ್ಯದರ್ಶಿ ರಮೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.