ಸಧೃಡ ಸಮಾಜಕ್ಕೆ ಸರ್ಕಾರಿ ಕಾಲೇಜುಗಳ ಪಾತ್ರ ದೊಡ್ಡದು
Government colleges play a big role in a strong society.
ಲೋಕದರ್ಶನ ವರದಿ
ಸಧೃಡ ಸಮಾಜಕ್ಕೆ ಸರ್ಕಾರಿ ಕಾಲೇಜುಗಳ ಪಾತ್ರ ದೊಡ್ಡದು
ನಿವೃತ್ತಿ ಜೀವನ ಸಮಾಜಮುಖಿ ಚಿಂತನೆಗೆ ಮೀಸಲು
ನರೇಗಲ್ 31: ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜುಗಳು ಸಧೃಡ ಸಮಾಜ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುತ್ತವೆ. ಇಲ್ಲಿ ಕಲಿಯುವ ರೈತರ, ಬಡವರ ಹಾಗೂ ಆರ್ಥಿಕವಾಗಿ ಹಿಂದುಗಳಿದವರ ಮಕ್ಕಳು ಬದುಕು ಕಟ್ಟಿಕೊಂಡಾಗ ಸಿಗುವ ಸಂತೋಷಕ್ಕೆ ಬೆಲೆಕಟ್ಟಲು ಆಗುವುದಿಲ್ಲ ಎಂದು ಸೇವಾನಿವೃತ್ತಿ ಹೊಂದಿದ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸೇವಾನಿವೃತ್ತಿ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗೌರಯುತ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆಯುತ್ತಿರುವುದು ನನ್ನ ಸ್ಮರಣೀಯ ದಿನಗಳಾಗಿವೆ. ಸೇವಾ ದಿನಗಳಲ್ಲಿ ಮಾಡಿದ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಹೇಳಿ ತಮ್ಮ ಸೇವೆಯ ದಿನಗಳನ್ನು ಸ್ಮರಿಸಿ???ಂಡರು.
ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಮಾತನಾಡಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಉದ್ದೇಶದೊಂದಿಗೆ ನಿರಂತರ ಬೋಧನೆ ಮಾಡಿ ಅವರ ಪ್ರಗತಿಗೆ, ಕಾಲೇಜಿನ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದರು.
ಗದಗನ ನಿವೃತ್ತ ಪ್ರಾಂಶುಪಾಲ ಎಫ್. ಎಸ್. ಸಿದ್ನೇಕೊಪ್ಪ ಮಾತನಾಡಿ, ಕಾಲೇಜು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಕಾಲೇಜಿಗೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಜೀವನ ಸಾಗಿಸಬೇಕು. ಹಾಗೆ ಕೊಡುಗೆಗಳನ್ನು ನೀಡುತ್ತಾ ಬಂದ ಗುಳೇದಗುಡ್ಡ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕಿ ಜಯಶ್ರೀ ಮುತಗಾರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಈ. ಆರ್. ಲಗಳೂರ, ಶೋಭಾ ಮೆರವಾಡೆ, ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಕಾಂಚನಮಾಲಾ ಪಾಟೀಲ, ನಸರೀನಾಬಾನು ಜಮಾದರ, ಶಿವಮೂರ್ತಿ ಕುರೇರ, ಅನಿಲಕುಮಾರ, ಶಶಿಕಲಾ ವಿ. ಎಸ್, ವಿರೂಪಾಕ್ಷ ದೇಶನೂರ, ವಿ. ಸಿ. ಇಲ್ಲೂರ, ಎಂ. ಎಫ್. ತಹಶೀಲ್ದಾರ, ಕೆ. ಎನ್. ಕಟ್ಟಿಮನಿ, ವಿ. ಕೆ. ಸಂಗನಾಳ, ಎನ್. ಎಸ್. ಹೊನ್ನೂರ, ಬಸವರಾಜ ಎಸ್. ಮಡಿವಾಳರ, ಲಕ್ಷ್ಮಣ ಹುಲ್ಲೂರು ಇದ್ದರು.
ನರೇಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ದಂಪತಿಗಳನ್ನು ಸನ್ಮಾನಿಸಲಾಯಿತು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 