ಸಿದ್ದರಾಮಯ್ಯ ವ್ಯಕ್ತಿ ಅಲ್ಲ - ಒಂದು ಶಕ್ತಿ
Siddaramaiah is not a person - he is a force.
ಲೋಕದರ್ಶನ ವರದಿ
ಸಿದ್ದರಾಮಯ್ಯ ವ್ಯಕ್ತಿ ಅಲ್ಲ - ಒಂದು ಶಕ್ತಿ
ಯರಗಟ್ಟಿ 31 : ಭಾರತೀಯ ರಾಜಕಾರಣದಲ್ಲಿ ತತ್ವ, ಸಿದ್ಧಾಂತ ಮತ್ತು ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ, ಕರ್ನಾಟಕದ ಹಿರಿಯ ಜನನಾಯಕ ಮಾನ್ಯ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಮುಗುಳ್ನಗೆಯಿಂದಲೇ ರಾಜೀನಾಮೆ ನೀಡುವ ಮೂಲಕ ರಾಜಕೀಯ ವ್ಯವಸ್ಥೆಗೆ ಅಪರೂಪದ ಆದರ್ಶಪ್ರಾಯ ಮಾದರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ,
ಅಧಿಕಾರಕ್ಕಾಗಿ ಕಚ್ಚಾಡುವ ಇಂದಿನ ಸ್ವಾರ್ಥ ರಾಜಕಾರಣದ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ನ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಗೌರವ ನೀಡಿ ಅವರು ತೋರಿದ ಈ ಘನತೆ ಇಡೀ ದೇಶದ ಗಮನ ಸೆಳೆದಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಮಾನವತಾವಾದಿ ವಿಚಾರಧಾರೆಗಳನ್ನು ಕೇವಲ ವೇದಿಕೆಯ ಭಾಷಣಕ್ಕೆ ಸೀಮಿತಗೊಳಿಸದೆ, ತಮ್ಮ ಇಡೀ ಬದುಕಿನುದ್ದಕ್ಕೂ ಉಸಿರಾಡಿದ ಏಕೈಕ ಧೀಮಂತ ನಾಯಕ ಸಿದ್ದರಾಮಯ್ಯ. ಅವರ ಎರಡು ಅವಧಿಗಳ ಇಡೀ ಆಡಳಿತ ಮಾದರಿಯು ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಹಕ್ಕುಗಳನ್ನು ತಲುಪಿಸುವ ಸಾಮಾಜಿಕ ನ್ಯಾಯದ ಗಟ್ಟಿ ತಳಹದಿಯ ಮೇಲೆ ನಿಂತಿತ್ತು. ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು ಅವರ ಸೈದ್ಧಾಂತಿಕ ನಿಷ್ಠೆ ಮತ್ತು ಧೈರ್ಯಕ್ಕೆ ಜ್ವಲಂತ ಸಾಕ್ಷಿಯಾಗಿದೆ.
"ನನ್ನ ಉಸಿರಿರುವ ಕೊನೆಯವರೆಗೂ ಸಂವಿಧಾನ ವಿರೋಧಿ ಮತ್ತು ಸಮಾಜವನ್ನು ಒಡೆಯುವ ಕೋಮುವಾದಿ ಶಕ್ತಿಗಳ ವಿರುದ್ಧ ಯಾವುದೇ ರಾಜಿಯಿಲ್ಲದೆ ಹೋರಾಡುತ್ತೇನೆ!"
ಅಧಿಕಾರ ಹೋದರೂ ತಮ್ಮ ಆಶಯಗಳಿಗೆ ಕಿಂಚಿತ್ತೂ ಧಕ್ಕೆ ತರಲು ಬಿಡುವುದಿಲ್ಲ ಎಂಬ ಅವರ ಈ ಸಿಂಹಗರ್ಜನೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು ಸತ್ಯ.
ಸಿದ್ದರಾಮಯ್ಯ ವ್ಯಕ್ತಿ ಅಲ್ಲ - ಒಂದು ಶಕ್ತಿ! ನುಡಿದಂತೆ ನಡೆದ ನಾಯಕ, ನಮ್ಮ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಆಡಳಿತಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರ ನಡೆ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ.ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಬಡವರ ಧ್ವನಿಯಾಗಿ ರಾಜ್ಯದಲ್ಲೇ ಉಳಿದು ಹೋರಾಡುವ ನಿಮ್ಮ ಸಂಕಲ್ಪ ನಮಗೆಲ್ಲರಿಗೂ ಪ್ರೇರಣೆ.
ಜಾತಿ-ಧರ್ಮದ ಭೇದವಿಲ್ಲದೆ ನಾಡಿನ ಜನತೆಗೆ ಪ್ರಾಮಾಣಿಕವಾಗಿ ಒಳಿತನ್ನು ಬಯಸಿದ ಜನಪರ ಆಡಳಿತಗಾರ
ಸಿದ್ದರಾಮಯ್ಯ ಕರ್ನಾಟಕದ ಹಾಲಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ 2013ಹಿ2018 ಪೂರ್ಣಾವಧಿ, ನಂತರ 2023ರಿಂದ 2ನೇ ಬಾರಿ ಸಿಎಂ. ದೇವರಾಜ ಅರಸು ನಂತರ ಪೂರ್ಣಾವಧಿ ಪೂರೈಸಿದ 2ನೇ ಸಿಎಂ ಇವರು.
ಉಪಮುಖ್ಯಮಂತ್ರಿ : 1996ಹಿ1999 ಮತ್ತು 2004ಹಿ2005ರಲ್ಲಿ 2 ಬಾರಿ ಹಣಕಾಸು ಸಚಿವ 13 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ ವಿರೋಧ ಪಕ್ಷದ ನಾಯಕ : 2009ಹಿ2013 ಮತ್ತು 2019ಹಿ2023ಪಕ್ಷ: ಮೊದಲು ಜನತಾ ಪರಿವಾರ, ಜೆಡಿಎಸ್ನಲ್ಲಿ ಇದ್ದು 2006ರಲ್ಲಿ ಕಾಂಗ್ರೆಸ್ ಸೇರಿದರು.
ಪ್ರಮುಖ ಯೋಜನೆಗಳು ಸಿಎಂ ಆಗಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ದಲಿತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಜಾರಿಗೆ ತಂದರು. 2013ಹಿ2018ರ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದಾಗಿ ಹೇಳಿದ್ದಾರೆ.
ನಂತರ 2023 ವಿಧಾನ ಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಜನಮನದಲ್ಲಿ ಶಾಶ್ವತವಾಗಿಇವೆ ಕರ್ನಾಟಕ ಸರ್ಕಾರವು ಜನಸಾಮಾನ್ಯರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ 5 ಪ್ರಮುಖ 'ಗ್ಯಾರಂಟಿ ಯೋಜನೆ'ಗಳನ್ನು ಜಾರಿಗೆ ತಂದಿದೆ.
1. ಗೃಹಲಕ್ಷ್ಮಿ ಯೋಜನೆ ಉದ್ದೇಶ: ಕುಟುಂಬದ ಯಜಮಾನಿಯಾದ ಮಹಿಳೆಗೆ ಆರ್ಥಿಕ ನೆರವು. ಸೌಲಭ್ಯ: ಮನೆಯ ಯಜಮಾನಿ ಎಂದು ಗುರುತಿಸಲ್ಪಟ್ಟ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ಜಮೆ ಮಾಡಲಾಗುತ್ತದೆ.
2. ಗೃಹ ಜ್ಯೋತಿ ಯೋಜನೆ ಉದ್ದೇಶ: ಮನೆ ಬಳಕೆದಾರರಿಗೆ ವಿದ್ಯುತ್ ಬಿಲ್ನಿಂದ ವಿನಾಯಿತಿ. ಸೌಲಭ್ಯ: ಪ್ರತಿ ತಿಂಗಳು ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ.
3. ಶಕ್ತಿ ಯೋಜನೆ ಉದ್ದೇಶ: ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ.ಸೌಲಭ್ಯ: ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ (ಏಖಖಖಿಅ, ಓಘಏಖಖಿಅ, ಏಏಖಖಿಅ) ಬಸ್ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದು.
4. ಅನ್ನಭಾಗ್ಯ ಯೋಜನೆ ಉದ್ದೇಶ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಧಾನ್ಯ.ಸೌಲಭ್ಯ: ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ನೀಡಲಾಗುತ್ತದೆ. ಜೊತೆಗೆ, ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಲಾಗುತ್ತದೆ.
5. ಯುವನಿಧಿ ಯೋಜನೆ ಉದ್ದೇಶ: ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ಭದ್ರತೆ.ಸೌಲಭ್ಯ: ಪದವಿ ಅಥವಾ ಡಿಪ್ಲೊಮಾ ಮುಗಿಸಿ, ಕೆಲಸ ಸಿಗದ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಇತ್ತೀಚಿನ ಸುದ್ದಿ ಕಾಂಗ್ರೆಸ್ನಲ್ಲಿನ "ಪವರ್ ಶೇರಿಂಗ್" ಚರ್ಚೆಯ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಹೈಕಮಾಂಡ್ "ನಾಯಕತ್ವ ಬದಲಾವಣೆ ಮಾಡಿ ನಿವು ರಾಜೀನಾಮೆ ನೀಡಿ ಎಂದು ಹೇಳಿದ ತಕ್ಷಣವೆ ಹೈಕಮಾಂಡ್ ಮಾತಿಗೆ ತಲೆಬಾಗಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜರಾಮರವಾಗಿ ಉಳಿದ ಭಾಗ್ಯಗಳ ಸಿದ್ದರಾಮಯ್ಯ.
ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 