ನೀರು ತುಂಬಿಸುವ ಯೋಜನೆಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ
ಬ್ಯಾಡಗಿ12: ಮೂಲ ನಕ್ಷೆಯಂತೆ ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆಗೆ ಆಗ್ರಹಿಸಿ ಮತ್ತು ಫೆ.18 ರಂದು ಬ್ಯಾಡಗಿ ಬಂದ್ಗೆ ನಡೆಸಲು ಅನುಮತಿ ಕೋರಿ ಕನರ್ಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಂಗಣ್ಣ ಎಲಿ ಮಾತನಾಡಿ, ಆಣೂರ ಕೆರೆ ತುಂಬಿಸುವ ಯೋಜನೆಗೆ ಬಜೆಟ್ನಲ್ಲಿ ಅನುದಾನ ಮೀಸಲಿಡದೇ ತಾಲೂಕು ಹಾಗೂ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ಅನ್ಯಾಯ ಮಾಡಲಾಗಿದೆ.
ಫೆ.6 ರಿಂದ ಮೂರು ದಿನ ಅಹೋರಾತ್ರಿ ಹೋರಾಟ ನಡೆಸಿದರೂ ಕೂಡಾ ಕವಡೆ ಕಾಸಿನ ಕಿಮ್ಮತ್ತು ನೀಡದ ಮುಖ್ಯಮಂತ್ರಿ ರೈತ ಸಂಘಗಳಿಗೆ ಅಗೌರವ ತೋರಿದ್ದಾರೆ ಎಂದರು.
ಉಗ್ರ ಹೋರಾಟಕ್ಕೆ ಮುನ್ನುಡಿ: ಮಲ್ಲಿಕಾಜರ್ುನ ಬಳ್ಳಾರಿ ಮಾತನಾಡಿ, ಸತತ 25 ವರ್ಷಗಳ ನಿರಂತವಾಗಿ ಆಣೂರ ಕೆರೆ ನೀರು ತುಂಬಿಸುವ ಯೋಜನೆಗೆ ಹೋರಾಟ ಮಾಡ ಲಾಗುತ್ತಿದೆ. ಒಟ್ಟು 680 ಕೋಟಿ ವೆಚ್ಚದ ಮೂಲನಕ್ಷೆಯಂತೆ ಕಾಮಗಾರಿ ಕೈಬಿಟ್ಟು ಅಧಿಕಾರದ ಉಳಿಸಿಕೊಳ್ಳಲು ಮಾಜಿ ಶಾಸಕರಾದ ಬಸವರಾಜ ಶಿವಣ್ಣನವರ ಅಧಿಕಾರಾವಧಿಯ ಕೊನೆಯಲ್ಲಿ 86 ಕೋಟಿ ವೆಚ್ಚದಲ್ಲಿ ಅಸುಂಡಿ ಕೆರೆ ತುಂಬಿಸುವ ಶಂಕುಸ್ಥಾಪನೆ ಮಾಡಿ ಮೂಲ ನಕ್ಷೆ ಕೈಬಿಡುವ ಮೂಲಕ ತಾಲೂಕಿನ ಜನತೆಗೆ ಅನ್ಯಾಯ ಮಾಡಿದ್ದಾರೆ. ಕಾಮಗಾರಿ ಕೂಡಾ ಇನ್ನೂ ಪ್ರಾರಂಭವಾಗಿಲ್ಲ ಇದು ರಾಜಕಾರಣಿಗಳ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ, ಆದ್ದರಿಂದ ಮುಂದಿನ ದಿನಗಳಲ್ಲಿ ಬ್ಯಾಡಗಿ ಬಂದ್, ಹೆದ್ದಾರಿ ಬಂದ್, ಕಾನೂನು ಭಂಗ ಚಳುವಳಿ, ಸೇರಿದಂತೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.
ಫೆ.18 ಕ್ಕೆ ಬ್ಯಾಡಗಿ ಬಂದ್: ಕಿರಣಕುಮಾರ ಗಡಿಗೋಳ ಮಾತನಾಡಿ, ರೈತರನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮುಗಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಹುನ್ನಾರ ನಡೆಸುತ್ತಿದ್ದಾರೆ. ಅಲ್ಲದೇ ಕೆರೆಗಳನ್ನು ತುಂಬಿಸದೆ ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿ ಭೂಮಿಯನ್ನು ಕಾಪರ್ೋರೆಟ್ ಕಂಪನಿಗಳಿಗೆ ಮಾರಾಟ ಮಾಡುವಲ್ಲಿ ತೊಡಗಿದ್ದಾರೆ ಎಂದರು, ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಮತ್ತು ಆಣೂರ ಕೆರೆ ತುಂಬಿಸುವ ನಿಟ್ಟಿನಲ್ಲಿ ಫೆ.18 ರಂದು ಬ್ಯಾಡಗಿ ಬಂದ ಕರೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೌನೇಶ ಬಡಿಗೇರ, ಚಿಕ್ಕಪ್ಪ ಛತ್ರದ ಮಲ್ಲೇಶಪ್ಪ ಡಂಬಳ, ಲಕ್ಷ್ಮಣ ಅಮಾತಿ, ನಿಂಗಪ್ಪ ಹೆಗ್ಗಣ್ಣನವರ, ಪ್ರವೀಣ ಹೊಸಗೌಡ್ರ, ಬಸವರಾಜ ಬಡ್ಡಿಯವರ, ಗದಿಗೆಪ್ಪ ಬಡ್ಡಿಯವರ, ನಾಗನಗೌಡ ತೆವರಿ, ಬಸವರಾಜ ಹುಲ್ಲತ್ತಿ, ಬಿ.ಎಸ್.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 