ಸಂತ್ರಸ್ತರಿಗೆ ಹೊಸ ಮನೆ ನಿರ್ಮಿಸಲು ಸಿದ್ಧ: ಪಾಟೀಲ
ಲೋಕದರ್ಶನ ವರದಿ
ಕಾಗವಾಡ: ಕೃಷ್ಣಾ ನದಿಗೆ ಮಹಾಪೂರದ ನೀರು ನುಗ್ಗಿ ಅನೇಕ ಕುಟುಂಬಗಳ ಸಂಸಾರ ಬೀದಿಪಾಲವಾಗಿದೆ. ಇದು ಪ್ರಕೃತಿವಿಕೋಪ ಇದನ್ನು ಎಲ್ಲರು ಘಟ್ಟಿಯಾಗಿ ಎದುರಿಸೋಣ. ಸರಕಾರದಿಂದ ಬರುವ ಎಲ್ಲ ಅನುದಾನಗಳು ಹೊಸ ಮನೆಗಳು ನಿರ್ಮಿಸು ವ ವ್ಯವಸ್ಥೆ ನಾವು ನೀಡಲು ಸಿದ್ಧರಿದ್ದೇವೆ ಎಂದು ಶ್ರೀಮಂತ ಪಾಟೀಲ ಫೌಂಡೇಶನದ ಆಧ್ಯಕ್ಷರು, ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾ ನೆಯ ಎಂ.ಡಿ. ಶ್ರೀನಿವಾಸ ಶ್ರೀಮಂತ ಪಾಟೀಲ ಜುಗೂಳದಲ್ಲಿ ಹೇಳಿದರು.
ಸೋಮವಾರ ರಂದು ಜುಗೂಳ ಗ್ರಾಮಕ್ಕೆ ಭೇಟಿನೀಡಿ ನದಿ ನೀರು ನುಗ್ಗಿ ಆಗಿರುವ ಹಾನಿ ವೀಕ್ಷಿಸಿದರು. ನೂರಾರು ಮನೆಗಳು ನೀರಿನಲ್ಲಿ ಉರುಳಿದ್ದು, ಆಸ್ತಿ-ಪಾಸ್ತಿ ನೀರಿನಲ್ಲಿ ಕೊಚ್ಚಿಕೊಂಡಿ ಹೋಗಿದೆ. ಈ ಕುಟುಂಬಗಳಿಗೆ ಧೈರ್ಯ ನೀಡುವುದು ಅವಶ್ಯಕತೆಯಿದೆ ಎಂದು ಶ್ರೀನಿವಾಸ ಪಾಟೀಲ ಹೇಳಿದರು.
ಜುಗೂಳ ಗ್ರಾಮದ ಕುಟುಂಬಗಳಿಗೆ ಸರಕಾರದಿಂದ ಮಂಜೂರುಗೊಂಡ ಚೇಕ್ ಹಂಚಿದರು. ಈಗಾಗಲೇ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ನದಿ ಪ್ರವಾಹ ಪ್ರಾರಂಭವಾದ ಬಳಿಕ ನಿರಂತರವಾಗಿ ಅವರಿಗೆ ಅವಶ್ಯಕತೆಯಿರುವ ಉಡುಪಗಳು, ಪರಿಹಾರ ಕೀಟ್, ಊಟದ ವ್ಯವಸ್ಥೆ ಸತತವಾಗಿ ನೀಡಲಾಗಿದೆ.
ಈ ಮುಂದೆಯೂ ನಿಮ್ಮೊಂದಿಗೆ ಸದಾಯಿರುತ್ತೇವೆ. ನೀವು ಧೈರ್ಯ ಕಳೆದುಕೊಳ್ಳದೆ, ಘಟ್ಟಿಯಾಗಿ ಇರರ್ಿ ಎಂದು ಧೈರ್ಯ ತುಂಬಿದರು.
ಅವರೊಂದಿಗೆ ಜುಗೂಳ ಗ್ರಾಮ ಪಂಚಾಯತಿ ಆಧ್ಯಕ್ಷ ಸಂಜಯ ಮಿಣಚೆ, ಅರುಣ ಗಣೇಶವಾಡಿ, ಸರದಾರ ಅತ್ತಾರ, ಸೇರಿದಂತೆ ಅನೇಕರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 