ಪ್ರೊ. ಸಾಲಿಮಠರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಸಿರಿ ಪ್ರಶಸ್ತಿ
ಲೋಕದರ್ಶನ ವರದಿ
ಹಾವೇರಿ23: ಧರ್ಮ ಚಿಂತಕ, ಯುವ ಸಾಹಿತಿ, ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಪ್ರಾಧ್ಯಾಪಕ ಪ್ರೊ. ಗುರುಪಾದಯ್ಯ ವೀ. ಸಾಲಿಮಠರಿಗೆ ರಾಜ್ಯ ಮಟ್ಟದ 'ಸಮಾಜ ಸೇವಾ ಸಿರಿ' ಪ್ರಶಸ್ತಿ ನೀಡಲಾಯಿತು. ಡಿ. 22 ರಂದು ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿಯ ಶ್ರೀ ವಿಶ್ವ ವಿನೂತನ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಹಮ್ಮಿಕೊಂಡಿದ್ದ 2018 ನೇ ಸಾಲಿನ ಪ್ರಥಮ ನುಡಿವೈಭವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ನಟ, ನಿದರ್ೇಶಕ ರಮೇಶ ಸುವರ್ೆ, ಕೈಗಾದ ಎ. ಎನ್, ರಮೇಶರವರಿಗೆ ರಾಷ್ಟ್ರೀಯ ಸಮಾಜಸೇವಾ ಪ್ರಶಸ್ತಿ, ಕಾಸರಗೋಡಿನ ರಂಗಕಮರ್ಿ ಪ್ರಭಾವತಿ ಕೆದಿಲಾಯ, ಶಿಗ್ಗಾಂವಿಯ ಡಿ. ಎಮ್. ಕೆಳಗೇರಿಯವರಿಗೆ ಶಿಕ್ಷಣ ರತ್ನ, ಬಾಗಲಕೋಟೆಯ ಪತ್ರಕರ್ತ ವಿರೇಶ ಹಿರೇಮಠರಿಗೆ ಸಮಾಜ ಸೇವಾ ಸಿರಿ, ಈ ಟಿವಿ ವಾಹಿನಿ ಕನ್ನಡ ಕೋಗಿಲೆ ಖ್ಯಾತಿಯ ಮಹೇಶ ಪಿ. ಹಾಗೂ ಅಖಿಲಾ ಪಜುಮಣ್ಣು, ನಗರದ ಖ್ಯಾತ ಗಾಯಕಿ ಶೀಲಾ ಪಾಟೀಲ ಹಾಗೂ ಸಾಸರವಾಡದ ಕಲಾವಿದ ನೀಲನಗೌಡ್ರ ಪಾಟೀಲರಿಗೆ ಕನರ್ಾಟಕ ಸಂಗೀತ ರತ್ನ ಪ್ರಶಸ್ತಿ ನೀಡಲಾಯಿತು. ರೈತ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಧಕ ರೈತರನ್ನು, ಪ್ರತಿಭಾವಂತ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಾರುತಿ ಶಿಡ್ಲಾಪುರ ವಹಿಸಿದ್ದರು. ಹಂಸಬಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಎಮ್. ಹುಚಗೊಂಡ್ರ, ಸಂಸ್ಥೆಯ ಅಧ್ಯಕ್ಷ ಡಾ|| ಪ್ರಭುಸ್ವಾಮಿ ಜಿ. ಹಾಲೇವಾಡಿಮಠ, ಕಾರ್ಯದಶರ್ಿ ಜ್ಯೋತಿ ಪಿ. ಹಾಲೇವಾಡಿಮಠ, ನಿವೃತ್ತ ಮುಖ್ಯೋಪಾಧ್ಯಾಯ ಜಿ. ಆರ್. ಕೆಂಚಕ್ಕನವರ, ಅಶೋಕ ತಿಳವಳ್ಳಿ, ಜಯಮ್ಮ ಎಮ್. ಕೆಳಗಿನಮನಿ, ಹನುಮಂತಪ್ಪ ಜಿಗಳೇರ, ರವಿ ಜಿ., ಬಸವರಾಜ ಕೆ., ಮಂಜುಳಾ ಕರ್ಜಗಿ, ಮೃತ್ಯುಂಜಯ ಬಾಸೂರು, ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ, ಪದ್ಮಾ ದಿಡಗೂರ, ನೀಲವ್ವ ಮೆಣಸಿನಕಾಯಿ ಮೊದಲಾದವರು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 