ಸೌಂದತ್ತಿ

ಮುನವಳ್ಳಿ ಪ್ರಾ.ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೇರಿಸಲು ಸೂಕ್ತಕ್ರಮ: ಮಾಮನಿ

ಮುನವಳ್ಳಿ ಪ್ರಾ.ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೇರಿಸಲು ಸೂಕ್ತಕ್ರಮ: ಮಾಮನಿ

ಮುನವಳ್ಳಿ 29: ಪಟ್ಟಣದ ಪ್ರಾಥೆಮಿಕ ಆರೋಗ್ಯ ಕೇಂದ್ರದಲ್ಲಿ ನ. 28 ರಂದು ಪಂಚಲಿಂಗೇಶ್ವರ ಹಿರಿಯ ನಾಗರಿಕರ ಸಂಘ ಹಾಗೂ ಸವದತ್ತಿ ತಾಲೂಕಾ ಅರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹದ ಉಚಿತ ತಪಾಸಣಾ ಶಿಬಿರ ಜರುಗಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ಮುನವಳ್ಳಿ ಪಟ್ಟಣ ಬೃಹತ್ತಾಗಿ ಬೆಳೆಯುತ್ತಿರುವುದರಿಂದ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದಜರ್ೆಗೇರಿಸಲು ಬೆಳಗಾವಿಯಲ್ಲಿ ಜರುಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಲಾಗುವುದು ಜೊತೆಗೆ ಹಿರಿಯ ನಾಗರಿಕರ ಭವನ ನಿಮರ್ಾಣಕ್ಕೆ ಶಾಸಕರ ಅನುದಾನದಲ್ಲಿ ಐದು ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಅಯ್. ಜಿ. ಚಂದರಗಿ ವಹಿಸಿದ್ದರು. ಅತಿಥಿಗಳಾಗಿ ಪಿ.ಡಿ.ಪಾಟೀಲ, ವೇ.ಮೂ. ಚಂದ್ರಯ್ಯಸ್ವಾಮಿ ವಿರಕ್ತಮಠ, ಶಂಕರ ಶೀಲವಂತ, ಈರಣ್ಣ ಸಂಕನ್ನವರ, ಬಸನಗೌಡ ದ್ಯಾಮನಗೌಡ್ರ, ರಮೇಶ ಗೋಮಾಡಿ, ಬಸವರಾಜ ದೇವಣಗಾಂವಿ, ಪುರಸಭೆ ಅಧ್ಯಕ್ಷೆ ಶ್ರೀಮತಿ ರೇಣವ್ವ ಭಜಂತ್ರಿ,ಉಪಾಧ್ಯಕ್ಷ ದುಂಡಪ್ಪ ಬುಜರ್ಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸವದತ್ತಿ ತಾಲೂಕಾ ಮುಖ್ಯವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ, ಡಾ. ವೀಣಾ ಮದನಭಾಂವಿ ಉಪಸ್ಥಿತರಿದ್ದರು.

ಸ್ವಾಗತವನ್ನು ವಾಯ್. ಎಫ್. ಶ್ಯಾನಭೋಗ, ನಿರೂಪಣೆಯನ್ನು ಹಿರಿಯರಾದ ಎಚ್. ಬಿ. ಅಸೂಟಿ ನೆರವೇರಿಸಿದರು.

ಸುದ್ದಿ ಓದಿ