ಅಮ್ಮ ಫೌಂಡೇಶನ್ (ರಿ) ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
Pratibha Award and Honors from Amma Foundation (R)
ಲೋಕದರ್ಶನ ವರದಿ
ಗದಗ 31:- ಅವಳಿ ನಗರವಾದ ಗದಗ ಬೆಟಗೇರಿಯ ಪ್ರತಿಷ್ಠಿತ ಸಾಮಾಜಿಕ, ಸೈಕ್ಷಣಿಕ ಪ್ರೋತ್ಸಾಹಕ ಸಂಸ್ಥೆಯಾದ ಅಮ್ಮ ಫೌಂಡೇಶನ್ ವತಿಯಿಂದ ಸನ್ 2025-26 ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದಂತಹ ಪ್ರತಿಭಾನ್ವಿತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಇದೇ ದಿನಾಂಕ 31 ರಂದು ನಗರದ 11 ನೇ ವಾರ್ಡಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಅವಿಸ್ಮರಣೀಯ ವಿದ್ಯಾರ್ಥಿಗಳ ಸೈಕ್ಷಣಿಕ ಪ್ರೋತ್ಸಾಹಕ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 551 / 625 ಅಂಕಗಳನ್ನು ಪಡೆದುಕೊಂಡು 88.16ಅ ರಷ್ಟು ಫಲಿತಾಂಶ ಪಡೆದ ಗದಗ ಶಹರದ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಕುಮಾರಿ ಸೌಜನ್ಯ ರಾಘವೇಂದ್ರ ಪಾಲನಕರ ಹಾಗೂ
ಸೇಂಟ್ ಜೋನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಶ್ರದ್ದಾ ಬೀಳಗಿ 88.64ಅ ಅಂಕ ಪಡೆದ ಪ್ರಯುಕ್ತ ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅದರಂತೆ ಇನ್ನೂ ಹಲವಾರು ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಸೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಗದಗ ಶಹರ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಎಚ್ ಪಾಟೀಲ್ ರವರು ಅಮ್ಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶರಣಪ್ಪ ಗೋಳಗೋಳಕಿ, ಗದಗ ಬೆಟಗೇರಿ ನಗರಸಭೆಯ 11 ನೇ ವಾರ್ಡಿನ ನಾಮನಿರ್ದೇಶಿತ ಸದಸ್ಯರಾದ ಶರಣಪ್ಪ ಗೋಳಗೋಳಕಿ, ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ, ಇಮಾಮಹುಸೇನ ರೋಣದ, ಕುಮಾರ ರೇವಣ್ಣವರ,ಎ ಟಿ ನರೇಗಲ್ಲ,ಶಿವಪ್ಪ ಹೊಟ್ಟಿ, ಮುತ್ತಣ್ಣ ಸೋಮನಕಟ್ಟಿ,
ಹನಮಂತಪ್ಪ ಕೊಟೆಕಲ್ಲ, ಮುನ್ನಾ ಹೆಬಸೂರ, ಪ್ರವೀಣ ಹೂಗಾರ, ವಿನಾಯಕ ಮಂಜರಗಿ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ಮತ್ತು ಸಮಸ್ತ ಅಮ್ಮ ಫೌಂಡೇಶನ ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಮತ್ತು ಗುರು ಹಿರಿಯರು ಮತ್ತು ತಾಯಂದೀರು ಸಹೋದರ ಸಹೋದರಿಯರು ಮತ್ತು ಯುವಕಮಿತ್ರರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 