ಹೂವಿನ ಹಡಗಲಿ

ಹೊಳಗುಂದಿಯಲ್ಲಿ ಪಾದಯಾತ್ರೆಗಳಿಗೆ ಪ್ರಸಾದ ಸೇವೆ

ಹೊಳಗುಂದಿಯಲ್ಲಿ ಪಾದಯಾತ್ರೆಗಳಿಗೆ ಪ್ರಸಾದ ಸೇವೆ

ಹೂವಿನಹಡಗಲಿ 10:   ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ನೆಲೆಸಿರುವ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದಲ್ಲಿ ’ಪಾದಯಾತ್ರೆ’ ಹೋಗುವವರಿಗೆ ತಾಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ  ಶ್ರೀ ಕೊಟ್ಟೂರೇಶ್ವರ ಸ್ವಾಮಿ ಟ್ರಸ್ಟ್‌ ನಿಂದ  ಪಾದಯಾತ್ರೆ ಗಳಿಗೆ  9ನೇ ವರ್ಷ ದಿಂದ ಪ್ರಸಾದ ಸೇವೆಯನ್ನು  ಆಯೋಜಿಸಿದ್ದರು.ಸಮಿತಿ ನಿವೃತ್ತ ಶಿಕ್ಷಕರಾದ ಯು.ವೀರೇಶ, ಬಿ.ಶಿವಪ್ಪ, ಮರಳು ನಾಗರಾಜ, ಸಂತೋಷ, ಕಮ್ಮಾರ ಕೊಟ್ರೇಶ, ಸಿದ್ದಪ್ಪ ಕಮ್ಮಾರ , ಡಿ.ಮಲ್ಲಿಕಾರ್ಜುನ, ಆನಂದ ,ಉಪ್ಪಾರ ಜೋಗಪ್ಪ ಅವರು ಪಾದಯಾತ್ರೆ ಗಳಿಗೆ ಬೆಳಿಗ್ಗೆ ಉಪಹಾರ, ಅನ್ನಸಂತರೆ​‍್ಣ ಹಮ್ಮಿಕೊಂಡಿದ್ದರು. 


ಸುದ್ದಿ ಓದಿ