ಮುಂದಗೋಡ

ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ: ದೈಹಿಕ ಶಿಕ್ಷಕ ಆರೋಪಿ ಬಂಧನ

ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ: ದೈಹಿಕ ಶಿಕ್ಷಕ ಆರೋಪಿ ಬಂಧನ

         ಮುಂಡಗೋಡ 25: ತಾಲೂಕಿನ ಖಾಸಗಿ ಲೊಯೋಲಾ ಪ್ರೌಢಶಾಲೆಯ ಕಿರಣ್ ಟೋಪೋಜಿ ಎಂಬುವ ದೈಹಿಕ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪದ ಹಿನ್ನೆಲೆ ವಿದ್ಯಾರ್ಥಿನಿಯ ಕುಟುಂಬದವರು ಇಲ್ಲಿನ ಪೊಲೀಸ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.  

          ತಾಲೂಕಿನ ಮುಡಸಾಲಿ ಗ್ರಾಮದ ಕಿರಣ ಟೋಪೋಜಿ ಎಂಬಾತನೇ ಆರೋಪಿತ  ಕಳೆದ 2 ವರ್ಷಗಳಿಂದ ಅಪ್ರಾಪ್ತ ಯುವತಿಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಈತನು ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಹೋಗಿ ಆಗಾಗ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಈ ವಿಷಯ ಯಾರಿಗಾದರೂ ಹೇಳಿದರೆ ಜೀವ ತೆಗೆಯುವ ಜೀವ ಬೇದರಿಕೆ ಹಾಕಿದ್ದನು ಎಂದು ಅಪ್ರಾಪ್ತ ಕುಟುಂಬದವರು ಇಲ್ಲಿನ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಫೋಕೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. 


ಸುದ್ದಿ ಓದಿ