ಅಂತರರಾಷ್ಟ್ರೀಯ

ಕಾಳಧನಕರ ರಹಸ್ಯ ಬಿಚ್ಚಿಟ್ಟ 'ಪಂಡೋರಾ ಪೇಪರ್ಸ್' .. ಪಟ್ಟಿಯಲ್ಲಿ 380 ಭಾರತೀಯರು

ಕಾಳಧನಕರ   ರಹಸ್ಯ  ಬಿಚ್ಚಿಟ್ಟ 'ಪಂಡೋರಾ ಪೇಪರ್ಸ್' .. ಪಟ್ಟಿಯಲ್ಲಿ   380 ಭಾರತೀಯರು

ವಾಷಿಂಗ್ಟನ್‌,   ಅ  4:  ಮತ್ತೊಮ್ಮೆ  ಸಂಚಲನಾತ್ಮಕ    ವಿಷಯಗಳು   ಬೆಳಕಿಗೆ ಬಂದಿವೆ.   ತೆರಿಗೆ  ವಂಚಕರ   ವಿವರಗಳು   ಮತ್ತೊಮ್ಮೆ ಸೋರಿಕೆಯಾಗಿದೆ. 2016 ದಲ್ಲಿ  ಸಂಚಲನ ಮೂಡಿಸಿದ  'ಪನಾಮ ಪೇಪರ್ಸ್'   ಮಾದರಿಯಲ್ಲಿಯೇ   "ಪಂಡೋರಾ ಪೇಪರ್ಸ್‌"  ಹೆಸರಿನಲ್ಲಿ    ಶ್ರೀಮಂತರು, ಉದ್ಯಮಿಗಳು, ರಾಜಕೀಯ ನಾಯಕರು,  ಸೆಲೆಬ್ರಿಟಿಗಳ  ಆಸ್ತಿಗಳು,  ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು  ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ)  ಬಹಿರಂಗಪಡಿಸಿದೆ. 

ಇತ್ತೀಚಿನ ದಿನಗಳಲ್ಲಿ ಇದು ಅತಿ ದೊಡ್ಡ  ದಾಖಲೆಗಳ  ಸೋರಿಕೆಯಾಗಿದ್ದು,  ಈ ಪಟ್ಟಿಯಲ್ಲಿ 91 ದೇಶಗಳ  ಶ್ರೀಮಂತರು, ಸೆಲೆಬ್ರಿಟಿಗಳು  ಹಾಗೂ  ರಾಜಕೀಯನಾಯಕರಿದ್ದಾರೆ.  ಈ ಪಟ್ಟಿಯಲ್ಲಿ 380 ಭಾರತೀಯರು  ಇರುವುದು  ಗಮನಾರ್ಹ 

ತೆರಿಗೆ  ಮುಕ್ತ    ದೇಶಗಳಾದ  ಪನಾಮ, ದುಬೈ, ಮೊನಾಕೊ, ಕೇಮನ್ ದ್ವೀಪಗಳು ಸೇರಿದಂತೆ    ಹಲವು   ದೇಶಗಳಲ್ಲಿ,   ಕಪ್ಪು ಹಣವನ್ನು  ಮುಚ್ಚಿಕೊಳ್ಳಲು    ಶ್ರೀ ಮಂತರು    ಆಸ್ತಿ   ಸಂಗ್ರಹಿಸಲು    ಶೆಲ್ ಕಂಪನಿಗಳನ್ನು  ಆರಂಭಿಸಿದ್ದಾರೆ.    ಇವುಗಳಿಗೆ   ಸಂಬಂಧಿಸಿದ  1.2 ಕೋಟಿ  ದಾಖಲೆಗಳನ್ನು ಸಂಗ್ರಹಿಸಿದ್ದೇವೆ  ಎಂದು  ಐ ಸಿ ಐಜೆ  ಹೇಳಿಕೊಂಡಿದೆ.   ಅಮೆರಿಕಾ,  ಭಾರತ, ಪಾಕಿಸ್ತಾನ, ಬ್ರಿಟನ್, ಮೆಕ್ಸಿಕೋ  ಮತ್ತಿತರ  ದೇಶಗಳ  ಶ್ರೀಮಂತರು,  ರಾಜಕೀಯ ನಾಯಕರ ಹೆಸರು   ಈ ಪಟ್ಟಿ  ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದೆ.

1. ಪಟ್ಟಿಯಲ್ಲಿರುವ ಹೆಚ್ಚಿನ  ಭಾರತೀಯರು ಆರ್ಥಿಕ ಅಪರಾಧಿಗಳು  ಹಾಗೂ  ಮಾಜಿ ಸಂಸದರು ಎಂಬುದು ಗಮನಾರ್ಹ 

2. ಪ್ರಮುಖ  ಉದ್ಯಮಿ  ಅನಿಲ್ ಅಂಬಾನಿ 18 ದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ

3. ಭಾರತೀಯ ಬ್ಯಾಂಕುಗಳಿಗೆ  ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ   ನೀರವ್ ಮೋದಿಯ ಸಹೋದರಿ, ಟ್ರಸ್ಟ್   ಸ್ಥಾಪಿಸಿದ್ದಾರೆ.  ನೀರವ್ ಮೋದಿ ವಿದೇಶಕ್ಕೆ ಪಲಾಯನಗೊಂಡ  ಒಂದು ತಿಂಗಳ ಮೊದಲು  ಟ್ರಸ್ಟ್‌  ಸ್ಥಾಪಿಸಲಾಗಿದೆ.

ಸುದ್ದಿ ಓದಿ