ಮಹಲಿಂಗಪುರ

ಶಿವಸೇನಾ ಪಕ್ಷದ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ ಭಜಂತ್ರಿ ನೇಮಕ

ಶಿವಸೇನಾ ಪಕ್ಷದ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ ಭಜಂತ್ರಿ ನೇಮಕ

           ಮಹಾಲಿಂಗಪುರ 23: ರಾಜಕೀಯ ಧುರುವಿಕರಣದ ವ್ಯವಸ್ಥೆಯಲ್ಲಿ ಯಾವುದೂ ಶಾಶ್ವತವಿಲ್ಲ ಅನ್ನುವುದು ಎಷ್ಟು ಸತ್ಯವೋ ಅದಕ್ಕೆ ಅನುಗುಣವಾಗಿ ಹೊಸ ರಾಜಕೀಯ ಪಕ್ಷದ ಉದಯ ಪಕ್ಕದ ರಾಜ್ಯ ಮಹಾರಾಷ್ಟ್ರ ರಾಜ್ಯದ  ಹಿಂದೂ ಹುಲಿ ಬಾಳಸಾಹೇಬ ಠಾಕರೆ ಅವರು ಹುಟ್ಟು ಹಾಕಿದ ರಾಜಕೀಯ ಪಕ್ಷವಾದ ಶಿವಸೇನಾ ಪಕ್ಷದ ಏಕನಾಥ ಬಣದ ಪಕ್ಷ ಕರ್ನಾಟಕದಲ್ಲಿ ಕಾಲಿಟ್ಟಿದ್ದು ಆದರ ಕರ್ನಾಟಕ ರಾಜ್ಯಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅವರ  ನೇತ್ರತ್ವದಲ್ಲಿ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾಗಿ ಮಹಾಲಿಂಗಪುರದ ನಾಗರಾಜ್ ಭಜಂತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದರು. 

           ನಗರದ ಸಿದ್ದಾರೂಢ ಆಶ್ರಮದಲ್ಲಿ ಶಿವಸೇನಾ ಕರ್ನಾಟಕ ಬಾಗಲಕೋಟ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಬಕವಿ ಬನಹಟ್ಟಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಅನಿಲ ಕಿರಿಕಿರಿ ಅವರನ್ನು ಮತ್ತು ಚನ್ನಪ್ಪ ಸಂಗಪ್ಪ ಕಲಾಗತಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಮತ್ತು ಮಹಾಲಿಂಗಪುರ ನಗರ ಘಟಕದ ಅಧ್ಯಕ್ಷರನ್ನಾಗಿ ಪ್ರಹ್ಲಾದ ನೂಲಿ ಅವರನ್ನು ಉಪಾಧ್ಯಕ್ಷರನ್ನಾಗಿ ರಾಜು ಪರಮಾನಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. 

          ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಪದಾಧಿಕಾರಿಗಳಾದ ಗಂಗಾಧರ ಕುಲಕರ್ಣಿ, ಎಸ್ ಭಾಸ್ಕರನ, ಮಹಾಲಿಂಗಪ್ಪ ಗುಂಜಗಾವಿ, ಅಮರನಾಥ, ಎಂ ಎಸ್ ಹರೀಶ. ಕಾರ್ಯಕರ್ತರಾದ ರಾಜು ಬಂದಿವಡ್ಡರ, ಸಿದ್ದು ಬೆಳವಂಕಿ, ಸಿದ್ಫು ಪೋತ, ಮಹಾಂತೇಶ ಗುಡೇಜಾಡರ, ನಾರಾಯಣ ಲಾತುರ, ಭರತ ಕದ್ದಿಮನಿ, ಮಹಾಲಿಂಗ ಲಾತುರ, ಅನಿಲ ಹೊನ್ನಬಡಬನ್ನವರ, ಗಣೇಶ್ ಪೂಜಾರಿ, ಮಹಾಲಿಂಗ ಹೊಸಪೇಟಿ, ಆನಂದ ನೂಲಿ ಅರ್ಜುನ್ ನಾಗರಾಳ, ತಿಮ್ಮಣ್ಣಗೌಡ ಪಾಟೀಲ, ಹಣಮಂತ ಚಂದಪ್ಪನವರ, ಭೀಮಶಿ, ಹುದ್ದಾರ, ಪರಮಾನಂದ ಧರ್ಮಟ್ಟಿ. ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ