ಹೂವಿನ ಹಡಗಲಿ

ಮೆಕ್ಕೆಜೋಳ ಖರೀದಿ ನೋಂದಣಿಗೆ ಚಾಲನೆ

ಮೆಕ್ಕೆಜೋಳ ಖರೀದಿ ನೋಂದಣಿಗೆ ಚಾಲನೆ

 

               ಹೂವಿನಹಡಗಲಿ  13 : ಸರಕಾರದ ಆದೇಶದಂತೆ ಮುಂಗಾರು ಹಂಗಾಮಿನ ಮೆಕ್ಕೆಜೋಳವನ್ನು ಎಪಿಎಂಸಿ ಮಾರುಕಟ್ಟೆ ವಹಿವಾಟು ದರದ ಆಧಾರದ ಮೇಲೆ ರೈತರಿಗೆ ಡಿಬಿಟಿ ಮೂಲಕ ಬೆಲೆ ವ್ಯತ್ಯಾಸವದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ. ರಾಜ್ಯ ರೈತ ಸಂಘದ ತಾಲ್ಲೂಕು ಅದ್ಯಕ್ಷ ಹೊಸಮನಿ ಸಿದ್ದಪ್ಪ ಹೇಳಿದರು.ಪಟ್ಟಣದಲ್ಲಿ ಸೋಮವಾರ ಗುಣಮಟ್ಟದ ಮೆಕ್ಕೆಜೋಳ ಖರೀದಿಗೆ ರೈತರ ನೋಂದಣಿ ಕಾರ್ಯಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಾಲ್ಗೆ 2150 ರೂ.ಇದೆ. ಪ್ರತಿ ಎಕರೆಗೆ 12 ಕ್ವಿಂಟಾಲ್ನಂತೆ ಫೂಟ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಗರಿಷ್ಠ 50 ಕ್ವಿಂ. ಮಾತ್ರ ಖರೀದಿಸಲಾಗುತ್ತದೆ. ದರ 1900 ರೂ.ಗಳಿಗಿಂತ ಕಡಿಮೆಯಾದರೆ ಕ್ವಿಂ.ಗೆ 250 ರೂ.ನಂತೆ ರೈತರಿಗೆ ಹಣ ಪಾವತಿಸಲಾಗುತ್ತದೆ. ಹೀಗೆ ದರ ಪಟ್ಟಿಯ ವ್ಯತ್ಯಾಸವನ್ನು ಸರಕಾರ ಬಿಡುಗಡೆ ಮಾಡಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು,” ಎಂದರು.  

               ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ಮಾತನಾಡಿ, ”ಈಗಾಗಲೇ ಎಥೆನಾಲ್ ಉತ್ಪಾದನೆಗೆ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರಮಹಾಮಂಡಳಕ್ಕೆ ಅಗತ್ಯವಿರುವ ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ ತಂತ್ರಾಂಶದಲ್ಲಿ ಚಾಲನೆಯಲ್ಲಿದೆ. ರೈತರು ನೋಂದಣಿ ಸ್ಥಳದಲ್ಲಿ ಆಧಾರ್ ಕಾರ್ಡ, ಐಡಿ ಕಾರ್ಡ್‌ ಗುರುತಿನ ಸಂಖ್ಯೆಯೊಂದಿಗೆ ಎನ್‌ಇಎಂಎಲ್ ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಮೂಲಕ ನೋಂದಣಿಮಾಡಿಸಿಕೊಂಡು ಮೆಕ್ಕೆಜೋಳವನ್ನು ಎಪಿಎಂಸಿ ಮಾರುಕಟ್ಟೆಗೆ ತರಬೇಕು ಎಂದು ಮನವಿ ಮಾಡಿದರು.ಸಂಘದ ಗೌರವಾಧ್ಯಕ್ಷ ಫಕ್ಕೀರ​‍್ಪ ಬಾವಿಹಳ್ಳಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಅಂಚೆ ಮಂಜುನಾಥ, ದೇವೇಂದ್ರ​‍್ಪ, ದುರುಗಪ್ಪ ಘನಿಸಾಬ್, ಫಕ್ಕೀರ​‍್ಪ, ಗುರುಬಸವರಾಜ, ಹನುಮಂತಪ್ಪ ಇದ್ದರು. 


ಸುದ್ದಿ ಓದಿ