ತಾಂತ್ರಿಕ ಸಮಸ್ಯೆಯಿಂದ ಮೆಕ್ಕೆಜೋಳ ಖರೀದಿ ಸ್ಥಗಿತ: ಸಂಕಷ್ಟದಲ್ಲಿ ಅನ್ನದಾತ
Maize procurement halted due to technical issues: Food supplier in distress
ಶಿರಹಟ್ಟಿ 17: ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿದೆಯಾದರೂ, ಸದ್ಯ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬೆಂಬಲ ಬೆಲೆಯ ಆಸೆಯಲ್ಲಿ ಸಾವಿರಾರು ರೈತರು ದಾಖಲೆ ಹಿಡಿದು ಕಾಯುತ್ತಿದ್ದಾರೆ.
ತಾಲೂಕಿನಲ್ಲಿ ಈವರೆಗೆ ಟಿಎಪಿಸಿಎಂಎಸ್ ಮೂಲಕ 216 ಕ್ವಿಂಟಾಲ್ ಮತ್ತು ಕೆಎಂಎಫ್ ಮೂಲಕ 71 ಕ್ವಿಂಟಾಲ್ ಸೇರಿ ಒಟ್ಟು 287 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ನೋಂದಣಿಯಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಲಾಗಿನ್ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸುಮಾರು 1,000ಕ್ಕೂ ಹೆಚ್ಚು ರೈತರ ನೋಂದಣಿ ಬಾಕಿ ಉಳಿದಿದೆ. ಕೇವಲ 16 ರೈತರಿಂದ 533 ಕ್ವಿಂಟಾಲ್ ಖರೀದಿಯಾದ ನಂತರ ಪ್ರಕ್ರಿಯೆ ನಿಂತಿರುವುದು ರೈತರನ್ನು ಖರೀದಿ ಕೇಂದ್ರದತ್ತ ಅಲೆದಾಡುವಂತೆ ಮಾಡಿದೆ.
ನೋಂದಣಿ ಪುನರಾರಂಭಿಸಲು ಸ್ಥಳೀಯ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಲಾಗಿನ್ ಮುಕ್ತವಾದ ತಕ್ಷಣ ಬಾಕಿ ಇರುವ ರೈತರ ನೋಂದಣಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ರೈತರ ಆಕ್ರೋಶ: ಸಾಲ ತೀರಿಸಲು ಮೆಕ್ಕೆಜೋಳ ಮಾರಾಟ ಮಾಡಬೇಕು. ಬೆಂಬಲ ಬೆಲೆ ಸಿಗುತ್ತೆ ಅಂತ ಇಲ್ಲಿಗೆ ಬಂದರೆ ವಾರದಿಂದ ಸರ್ವರ್ ಬರ್ತಿಲ್ಲ ಅಂತ ಹೇಳ್ತಿದ್ದಾರೆ. ನಮಗಾಗುತ್ತಿರುವ ತೊಂದರೆ ಯಾರಿಗೆ ಹೇಳಬೇಕು?" ಹಿ ಮೆಕ್ಕೆಜೋಳ ಬೆಳೆದ ರೈತರು. ಖಾಸಗಿ ಮಾರುಕಟ್ಟೆಯಲ್ಲಿ ದರ ಕಡಿಮೆ ಇದೆ. ಸರ್ಕಾರಿ ಕೇಂದ್ರ ನಂಬಿ ಕಾದು ಕುಳಿತರೆ ಇಲ್ಲಿ ನೋಂದಣಿಯೇ ಆಗುತ್ತಿಲ್ಲ. ನಿತ್ಯವೂ ಕೇಂದ್ರಕ್ಕೆ ಬಂದು ಹೋಗಿ ಸುಸ್ತಾಗಿದ್ದೇವೆ." ಹಿ ಸಂಕಷ್ಟದಲ್ಲಿರುವ ಅನ್ನದಾತ. ಕೂಡಲೇ ಲಾಗಿನ್ ಸಮಸ್ಯೆ ಸರಿಪಡಿಸಿ, ತಾಲೂಕಿನ ಪ್ರತಿಯೊಬ್ಬ ರೈತರ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಸಕಲ ವ್ಯವಸ್ಥೆ ಮಾಡಬೇಕು ಎಂಬುದು ಶಿರಹಟ್ಟಿ ಭಾಗದ ರೈತರ ಒಕ್ಕೊರಳ ಆಗ್ರಹವಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 