ಅಂತರರಾಷ್ಟ್ರೀಯ

ಮೆಕ್ಸಿಕೋ; ಟ್ರಕ್‌ ಅಪಘಾತ.. 53 ಮಂದಿ ಸಾವು

ಮೆಕ್ಸಿಕೋ;   ಟ್ರಕ್‌   ಅಪಘಾತ..  53  ಮಂದಿ  ಸಾವು

ಮೆಕ್ಸಿಕೋ, ಡಿ  10:  ತಮ್ಮ  ಜೀವವನ್ನೇ   ಪಣಕ್ಕಿಟ್ಟು  ಅಮೆರಿಕಾ  ಗಡಿ    ತಲುಪಲು    ಮೆಕ್ಸಿಕೊ  ಜನರು   ಎದುರಿಸುವ  ಸಂಕಷ್ಟಗಳು  ನೂರಾರು.    ಆದರೆ,  ಇಂತಹ  ಪ್ರಯತ್ನದ ಭಾಗವಾಗಿ ತೆರಳುತ್ತಿದ್ದ     ಟ್ರಕ್    ಉರುಳಿ      ವಲಸಿಗರು   ಸಾವನ್ನಪ್ಪಿದ್ದಾರೆ.  ದಕ್ಷಿಣ ಮೆಕ್ಸಿಕೋದಲ್ಲಿ  ಗುರುವಾರ  ಸಂಭವಿಸಿದ  ಭೀಕರ ಅಪಘಾತದಲ್ಲಿ  ಕನಿಷ್ಠ 53 ಮಂದಿ  ಅಮೆರಿಕನ್ ವಲಸಿಗರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪುರುಷರು, ಮಹಿಳೆಯರು  ಹಾಗೂ  ಮಕ್ಕಳು ಸೇರಿದ್ದಾರೆ ಎಂದು ಚಿಯಾಪಾಸ್ ನಾಗರಿಕರ ರಕ್ಷಣಾ ಏಜೆನ್ಸಿ   ಹೇಳಿದೆ. ಅಪಘಾತದಲ್ಲಿ   ಗಾಯಾಳುಗಳನ್ನು    ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಚಿಯಾಪಾಸ್‌  ರಾಜ್ಯದ  ಟೆಕ್ಸ್‌ ಟ್ಲಾ  ಗುಟೆರಜ್‌  ನಗರ  ರಸ್ತೆ   ತಿರಿವಿನಲ್ಲಿ   ಟ್ರಕ್‌   ಅಪಘಾತಕ್ಕೀಡಾಗಿ  ಈ ಘಟನೆ ನಡೆದಿದೆ  ಎಂದು ಚಿಯಾಪಾಸ್‌    ನಾಗರಿಕ ರಕ್ಷಣಾ ಏಜೆನ್ಸಿ   ಮುಖ್ಯಸ್ಥ   ಲೂಯಿಸ್‌  ಮಾನ್ಯುವಲ್‌  ಗಾರ್ಸಿಯಾ  ಹೇಳಿದ್ದಾರೆ.
ವಾಹನದಲ್ಲಿ  ಕನಿಷ್ಠ 107 ಮಂದಿ ಇದ್ದರು   ಎಂಬುದು   ಪ್ರಾಥಮಿಕ ಅಂದಾಜು.  ದಕ್ಷಿಣ ಮೆಕ್ಸಿಕೋದಲ್ಲಿ ಅವರನ್ನು  ಸಾಗಿಸುತ್ತಿದ್ದ ಟ್ರಕ್   ಕಿಕ್ಕಿರಿದ  ಪ್ರಯಾಣಿಕರು,  ಅತಿವೇಗದ  ಕಾರಣ  ಫುಟ್‌ಪಾತ್‌ಗೆ  ಅಪ್ಪಳಿಸಿ   ಅಪಘಾತ ಸಂಭವಿಸಿದೆ  ಎಂದು ಅಧಿಕಾರಿಗಳು ಹೇಳಿದ್ದಾರೆ. ಮೆಕ್ಸಿಕೋದಿಂದ ಅಮೆರಿಕಾಗೆ  ಅಕ್ರಮ ವಲಸೆ ಸಾಮಾನ್ಯವಾಗಿದೆ.  ಕಳೆದ ತಿಂಗಳು  652 ಅಕ್ರಮ ವಲಸಿಗರನ್ನು  ಸಾಗಿಸುತ್ತಿದ್ದ ಆರು ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾನವ ಕಳ್ಳಸಾಗಣೆ ಘಟನೆಗಳು ನಿರಂತರವಾಗಿ  ನಡೆಯುತ್ತಿವೆ. ಮೆಕ್ಸಿಕೋದ  ಜನರು    ನೆರೆಯ ದೇಶಗಳಿಂದ ಅಮೆರಿಕ ಪ್ರವೇಶಿಸಲು   ಪ್ರಯತ್ನಿಸುತ್ತಿದ್ದಾರೆ. ಈ ಟ್ರಕ್‌ ಸಹ   ಅಂತಹದೇ . ಏತನ್ಮಧ್ಯೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಎಲ್ಪೆಜ್ ಒಬ್ರಡಾರ್ ಅವರು  ಟ್ವಿಟರ್ ಮೂಲಕ ಘಟನೆಗೆ ಸಂತಾಪ ಸೂಚಿಸಿದ್ದಾರೆ.



ಸುದ್ದಿ ಓದಿ