ಕೆಎಲ್ಇ ಮನ್ನಣೆ ಪಡೆಯಲು ಲಿಂಗರಾಜರ ಪಾತ್ರ ಪ್ರಮುಖ: ಡಾ.ಎನ್.ಪಿ.ನಾಡಗೌಡರ
ಮಹಾಲಿಂಗಪುರ 10: ಶ್ರಮ, ಶ್ರದ್ದೆ, ತನು-ಮನ, ಧನದಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳದು ಬದ್ಧತೆಯನ್ನು ಕಾಪಾಡಲು ಸಾಧ್ಯವಾಗಿದೆ. ಸಾಕಷ್ಟು ಮಹನೀಯರು ಶ್ರಮದಿಂದ ಕೆಎಲ್ಇ ಸಂಸ್ಥೆ ಬಹಳ ಶ್ರೇಷ್ಠ ಕಾರ್ಯಗಳನ್ನು ಮಾಡಿದೆ. ಅಥಣಿ ಮುರಘೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಯೋಗ್ಯ ಗುರುವಿನ ಪ್ರೇರಣೆಯಿಂದಾಗಿ ಲಿಂಗರಾಜರು ತ್ಯಾಗವೀರ ಸಿರಸಂಗಿ ಲಿಂಗರಾಜ ಎನಿಸಿಕೊಂಡರು. ಸಂಸ್ಥೆಯ ಮಹಾನ ದಾನಿಗಳ ಪೈಕಿ ಲಿಂಗರಾಜರು ಒಬ್ಬರಾಗಿದ್ದಾರೆ. ಸಂಸ್ಥೆ ಜಾಗತಿಕ ಮನ್ನಣೆ ಪಡೆಯಲು ಲಿಂಗರಾಜರು ಸಹ ಕಾರಣವಾಗಿದ್ದಾರೆ ಎಂದು ಡಾ.ಎನ್.ಪಿ.ನಾಡಗೌಡರ ಎಂದು ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್ಇ ಅಂಗ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜ 165ನೇ ಜಯಂತಿಯನ್ನು ಹುನಗುಂದದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ.ಎನ್.ಪಿ.ನಾಡಗೌಡರ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶೇಷವಾಗಿ ಮಾತನಾಡಿ ಲಿಂಗರಾಜರು ಬರಗಾಲದಲ್ಲಿ ಕೆರೆಯನ್ನು ಕಟ್ಟಿಸಿದ್ದಾರೆ. ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಸರ್ವ ಧರ್ಮ ಸಮಾನತೆಯನ್ನ ಕಾಪಾಡಿದವರು. ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಗಳಿಗೆ ಧಾನ ನೀಡಿದವರು. ಧನಾತ್ಮಕ ಆಲೋಚನೆಯಿಂದ ಹೃದಯ ಶ್ರೀಮಂತಿಕೆ ಹೊಂದಿದವರು. ತಮಗಾಗಿ ಏನು ಮಾಡಿಕೊಳ್ಳದೆ ಎಲ್ಲವನ್ನು ಸಮಾಜಕ್ಕೆ ದಾನ ಮಾಡಿದವರು ತ್ಯಾಗರಾಜರು ಎಂದರು.
ನಂತರ ಕಾಲೇಜಿನ ಪ್ರಾಚಾರ್ಯ ಎಸ್. ಆಯ್. ಕುಂದಗೋಳ ಮಾತನಾಡಿ ಲಿಂಗರಾಜರು ತಮ್ಮ ಸಮಸ್ತ ಅಸ್ತಿಯನ್ನು ದಾನ ಮಾಡಿದವರು. ಲಿಂಗರಾಜ ಟ್ರಸ್ಟ್ ವತಿಯಿಂದ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ತಮ್ಮ ಅಸ್ತಿಯನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದವರು.ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಲು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಲಿಂಗರಾಜರು ಆದರ್ಶವಾಗಿದ್ದಾರೆ. ನಮ್ಮ ಆದಾಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದಾನ ಮಾಡಿದರೆ ಈ ಕಾರ್ಯಕ್ರಮ ಸಾರ್ಥಕವಾದಂತೆ ಎಂದು ಹೇಳಿದರು.
ಪ.ಮ. ಪ್ರಾಚಾರ್ಯಎನ್.ಬಿ.ಪಾಟೀಲ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜ್ನ ಪ್ರಾಚಾರ್ಯ ಎಲ್. ಬಿ. ತುಪ್ಪದ ಕಾರ್ಯಕ್ರಮದಲ್ಲಿ ವಂದಿಸಿದರು.ಎಪ್.ಆರ್.ಅಜಿಮಠ ಮತ್ತು ಜಿ.ಬಿ.ಹಿರೇಮಠ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಿ.ಎನ್.ಅರಕೇರಿ, ಸಂತೋಷ ಹುದ್ದಾರ,ಎಸ್.ಎಸ್. ಅಂಗಡಿ,ಅಮಿತ ಚಮಕೇರಿ, ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.