ಮಹಲಿಂಗಪುರ

ಎಲ್‌.ಐ.ಸಿ ಪಾಲಿಸಿದಾರರಿಗೆ ಎಲ್ಲ ತರಹದ ಮೆಡಿಕಲ್ ಸೌಲಭ್ಯ ಸಿಗಬೇಕು: ವಿವೇಕಾನಂದ

ಎಲ್‌.ಐ.ಸಿ ಪಾಲಿಸಿದಾರರಿಗೆ ಎಲ್ಲ ತರಹದ ಮೆಡಿಕಲ್ ಸೌಲಭ್ಯ ಸಿಗಬೇಕು: ವಿವೇಕಾನಂದ


          ಮಹಾಲಿಂಗಪುರ 13:  ಭಾರತೀಯ ಜೀವವಿಮಾ ನಿಗಮದ ಎಲ್ಲ ಡೊಡ್ಡ ಮೊತ್ತದ ಹೊಸ ಪಾಲಿಸಿದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಂಸ್ಥೆ ಈಗ ನೂತನವಾಗಿ ವೆಂಕಟೇಶ ಆಸ್ಪತ್ರೆಯಲ್ಲಿ ಟಿ.ಪಿ.ಎ. ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದು ಜಮಖಂಡಿ ಎಲ್‌.ಐ.ಸಿ ಬ್ರ್ಯಾಂಚ ಮಾನೇಜರ ವಿವೇಕಾನಂದ ಎಲ್‌.ಎಚ್ ಹೇಳಿದರು.  

     ಸ್ಥಳೀಯ ಡಾ.ವೆಂಕಟೇಶ ಆಸ್ಪತ್ರೆಯಲ್ಲಿ ಎಲ್‌.ಐ.ಸಿ ಆಶ್ರಯದಲ್ಲಿ ನಡೆದ  ತರ್ಡ ಪಾರ್ಟಿ ಎಡ್ಮೀನಿಸ್ಟೇಟರ್ ಮೇಡಿಕಲ್ ಸೌಲಭ್ಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಷ್ಟು ದಿನ ದೊಡ್ಡ ಮೊತ್ತದ ಪಾಲೀಸಿ ಮಾಡಲು ಪಾಲೀಸಿದಾರರು ಬೇರೆ ಊರುಗಳಿಗೆ ಹೋಗಬೇಕಾಗಿತ್ತು. ಅದರಿಂದ ಹಣ ಮತ್ತು ಸಮಯ ಎರಡನ್ನು ವ್ಯೆಯ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ತೊಂದರೆಯನ್ನು ಎಲ್ಲ ಪ್ರತಿನಿಧಿಗಳು ಸತತ 2 ವರ್ಷಗಳಿಂದಲೂ ಹೇಳುತ್ತಲೆ ಇದ್ದರು. ಆದರೆ ಆ ಕಾರ್ಯಕ್ಕೆ ಇಂದು ಚಾಲನೆ ದೊರೆತಿರುವುದು ಸಂತಸ ತಂದಿದೆ. ಕಾರಣ ಈ ಟಿ.ಪಿ.ಎ ಸೌಲಭ್ಯವನ್ನು ಎಲ್ಲ ಪ್ರತಿನಿಧಿಗಳು, ದೊಡ್ಡ ಮಟ್ಟದ ಪಾಲೀಸಿ ಮಾಡುವವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಂತರ ಮಾತನಾಡಿದ ಮುಧೋಳ ಬಿ.ಎಂ. ಪಡೇನ್ನವರ, ಮತ್ತು ರಬಕವಿ ಬಿ.ಎಂ ಪ್ರಕಾಶ ಕಾಂಬಳೆ ಮಾತನಾಡಿದರು.  

       ವೆಂಕಟೇಶ ಆಸ್ಪತ್ರೆಯಲ್ಲಿ ನಡೆದ ಟಿ.ಪಿ.ಎ ಸೌಲಭ್ಯ ಕಾರ್ಯಕ್ರಮವನ್ನು ರಿಬ್ಬನ ಕತ್ತರಿಸುವ ಮೂಲಕ  ಖ್ಯಾತ ಹೃದಯರೋಗ ತಜ್ಞ ಡಾ. ಅಜೀತ ಕನಕರಡಿ ಚಾಲನೆ ನೀಡಿದರು ಎಲ್‌.ಐ.ಸಿ ವತಿಯಿಂದ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲ ಪಾಲೀಸಿದಾರರಿಗೆ ಮತ್ತು ಎಲ್‌.ಐ.ಸಿ ಪ್ರತಿನಿಧಿಗಳಿಗೆ ಎಲ್ಲ ತರಹದ ಮೆಡಿಕಲ್ ಸೌಲಭ್ಯಗಳನ್ನು ನಾನು ಮಾಡಿಕೊಡಲು ನಾನು ಸಹಕರಿಸುತ್ತೇನೆ ಎಂದರು.  

      ಜಮಖಂಡಿ, ಮುಧೋಳ, ರಬಕವಿ ಶಾಖೆಗಳ ಎಲ್ಲ ಡಿ.ಓಗಳು, ಮತ್ತು ಪ್ರತಿನಿಧಿಗಳಾದ ಡಿವಿಜನ ಪ್ರೇಸಿಡೆಂಟ ಪ್ರಕಾಶ ತಡಸದ, ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆನಂದ ಹೊಸಕೋಟಿ ಪ್ರತಿನಿಧಿಗಳಾಧ ಅಶೋಕ ವಸ್ತ್ರದ, ಈರಣ್ಣ ಹಲಗತ್ತಿ. ಬಿ.ಬಿ ಉಂದ್ರಿ, ಗುರುರಾಜ ಖಾಸನೀಸ, ಈರಣ್ಣ ಸಪ್ತಸಾಗರ, ಮಹಾಲಿಂಗಪ್ಪ ಅನಂತಪುರ, ಸಿದ್ದು ಬೆನ್ನೂರ, ಮಹೇಶ ಸೌವದಿ, ಶಂಕರ ಮುರುಗೋಡ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ