ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ
Kariamma Devi Jatra Festival
ಧಾರವಾಡ 11: ಧಾರವಾಡದ ಕೆಲಗೇರಿ ರಸ್ತೆ ಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು 23 ನೇಯ ವಾರ್ಷಿಕೋತ್ಸವದ ಸಮಾರಂಭ ಇದೇ ಮಾರ್ಚ 13 ರಿಂದ 19 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಅನಾದಿಕಾಲದಿಂದಲೂ ರೈತರು ಕರಿಯಮ್ಮ ದೇವಿಗೆ ಶ್ರದ್ದೆ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದು, ಈ ದೇವಸ್ಥಾನವು ಭಾವೈಕ್ಯತೆಯ ಕೇಂದ್ರವು ಸಹ ಆಗಿದೆ.
ಮಾರ್ಚ 13 ರಿಂದ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿ ದಿನ ಸಂಜೆ ಭಜನೆ ಹಾಗೂ ಪ್ರಾರ್ಥನೆ ನಡೆಯಲಿದ್ದು, ರಾತ್ರಿ 8.30 ಕ್ಕೆ ಪ್ರಸಾದ ಮತ್ತು 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರಿ್ಡಸಲಾಗಿದೆ. ಮಾರ್ಚ 17 ರಂದು ಸಾಯಂಕಾಲ 4 ಗಂಟೆಗೆ ಮಹಿಳೆಯರಿಂದ ಸಾಮೂಹಿಕ ಕಂಕುಮಾರ್ಚನೆ ನಡೆಯಲಿದೆ. ಮಾರ್ಚ 18 ರಂದು ಬೆಳ್ಳಿಗ್ಗೆ ಕಾಕಡಾರತಿ, ಸಂಕಲ್ಪ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 7 ಗಂಟೆಗೆ ಭಜನೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಮಾರ್ಚ 19 ಗುರುವಾರ ಯುಗಾದಿ ಹಬ್ಬದಂದು ಬೆಳ್ಳಗ್ಗೆ ಸುಪ್ರಭಾತ, ಕಾಕಡಾರತಿ ಹಾಗೂ ಅಭಿಷೇಕ ಮುಂಜಾನೆ 9 ಗಂಟೆಗೆ ದೇವಿಗೆ ವಿಶೇಷ ಅಲಂಕಾರ ಹಾಗೂ 10 ಗಂಟೆಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ದೇವಿಗೆ ಎರಡನೇ ಅಲಂಕಾರ ಮಾಡಲಾಗುವುದು.ನಂತರ ಪಲ್ಲಕ್ಕಿ ಉತ್ಸವ ಪ್ರದಕ್ಷಿಣೆ ಶಾಂತಿ ನಿಕೇತನ ನಗರದಲ್ಲಿ ನಡೆಯಲಿದೆ. ಜಾತ್ರಾ ಮಹೋತ್ಸವದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕರು ಮತ್ತು ದೇವಸ್ಥಾನದ ಚೇರಮನ್ನರಾದ ಶ್ರೀ ಎನ್ಎಚ್.ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 