“ಇಲ್ಲಿ ಕಸ ಹಾಕಬೇಡಿ” ಫಲಕವೇ ದಂಡವಾಗಿತೇ? ಕಸದ ಪೆಟ್ಟಿಗೆ ಓವರ್ಫ್ಲೋ ಹಿ ಸುತ್ತಮುತ್ತ ಪ್ಲಾಸ್ಟಿಕ್ ರಾಶಿ, ಕಸದ ಪರ್ವತ!
ಮುಂಡಗೋಡ 01: ಪಚಿ ಸುರಿಯಲಾಗುತ್ತಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸೂಚನಾ ಫಲಕಗಳಿಗೆ ಕಿಮ್ಮತ್ತೇ ಇಲ್ಲದಂತೆ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ದೃಶ್ಯಗಳು ಪಟ್ಟಣದ ಹಲವೆಡೆ ಕಂಡುಬರುತ್ತಿವೆ. ಪಟ್ಟಣದ ಹುಬ್ಬಳ್ಳಿ ರಸ್ತೆ ಎಸ್ಕಾಂ ಕಚೇರಿ ಮುಂಭಾಗದಿಂದ ಕಡಲ್ಗಿಕಟ್ಟೆ ಕೆರೆಗೆ ತೆರಳುವ ಮಾರ್ಗದ ರಸ್ತೆ ಬದಿಯಲ್ಲಿ ಕಸದ ರಾಶಿಗಳು ಪರ್ವತದಂತೆ ಸಂಗ್ರಹವಾಗಿದ್ದು, ಪರಿಸ್ಥಿತಿ ತೀವ್ರವಾಗಿ ಚಿಂತಾಜನಕವಾಗಿದೆ. ಪ್ಲಾಸ್ಟಿಕ್ ಕವರ್ಗಳು, ಆಹಾರ ತ್ಯಾಜ್ಯ, ಮೆಡಿಕಲ್ ತ್ಯಾಜ್ಯ ಸೇರಿದಂತೆ ಅಪಾಯಕಾರಿ ಕಸವನ್ನು ಅಕ್ರಮವಾಗಿ ಸುರಿದು ಹೋಗಲಾಗುತ್ತಿದೆ. ಪಟ್ಟಣ ಪಂಚಾಯತ್ ವತಿಯಿಂದ ಇಲ್ಲಿ ಕಸದ ಪೆಟ್ಟಿಗೆಯನ್ನು ಅಳವಡಿಸಿದರೂ, ಸಾರ್ವಜನಿಕರು ಅದನ್ನು ಸಮರ್ಕವಾಗಿ ಬಳಸದೇ ಪೆಟ್ಟಿಗೆಯ ಸುತ್ತಮುತ್ತಲೇ ಕಸ ಸುರಿಯುತ್ತಿರುವುದು ಕಂಡುಬಂದಿದೆ. ಕಸದ ಪೆಟ್ಟಿಗೆ ಈಗಾಗಲೇ ತುಂಬಿ ಓವರ್ಫ್ಲೋ ಆಗಿದ್ದು, ಮೇಲ್ಭಾಗ ಹಾಗೂ ಸುತ್ತಲೂ ಕಸದ ರಾಶಿ ಹರಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ದುರ್ವಾಸನೆ ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚುತ್ತಿದೆ. ಪಟ್ಟಣದ ಬಹುತೇಕ ರಸ್ತೆ ಬದಿಗಳಲ್ಲಿಯೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳ ರಾಶಿಗಳು ಜಮೆಯಾಗಿದ್ದು, ಸ್ವಚ್ಛತೆ ಕುರಿತು ಆಡಳಿತ ಹಾಗೂ ಸಾರ್ವಜನಿಕರ ಜವಾಬ್ದಾರಿತನದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಕಸ ಹಾಕಬಾರದೆಂದು ಸೂಚಿಸುವ ಫಲಕಗಳೇ ಕಸದ ತಾಣಗಳಾಗಿ ಮಾರ್ಪಟಟಿರುವುದು ವ್ಯಂಗ್ಯಾತ್ಮಕ ಸ್ಥಿತಿಯನ್ನು ನಿರ್ಮಿಸಿದೆ. ಈ ಕುರಿತು ಪಟ್ಟಣ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಸ್ಥಳ ಪರೀಶೀಲನೆ ನಡೆಸಿ, ಕಸದ ಪೆಟ್ಟಿಗೆಗಳನ್ನು ನಿಯಮಿತವಾಗಿ ತೆರವುಗೊಳಿಸುವುದರ ಜೊತೆಗೆ, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.