ನಾಗಮೋಹನದಾಸ ವರದಿ ಶೀಘ್ರ ಅನುಷ್ಠಾನಗೊಳಿಸಿ: ನಾಯಕ
ಲೋಕದರ್ಶನ ವರದಿ
ಸವದತ್ತಿ 21: ಮೀಸಲಾತಿ ಇದ್ದಲ್ಲಿ ಮಾತ್ರ ಎಲ್ಲ ವರ್ಗದ ಜನರು ಆಥರ್ಿಕ ಹಾಗೂ ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಸಾಧ್ಯ. ಅಂಬೇಡ್ಕರ ಅವರು ದೂರದೃಷ್ಠಿಯಿಂದ ಮೀಸಲಾತಿಗೆ ಅವಕಾಶ ನೀಡಿದ್ದು, ಸದ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಎಚ್.ಎನ್. ನಾಗಮೋಹನದಾಸ ವರದಿ ಶೀಘ್ರ ಅನುಷ್ಠಾನಗೊಳಿಸಬೇಕೆಂದು ಸಂಘಟನೆ ಪ್ರಮುಖ ಎಲ್.ಎಸ್ ನಾಯಕ ಹೇಳಿದರು.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ರಾಜ್ಯ ಸ್ವಾಭಿಮಾನಿ ಎಸ್ಸಿ ಮತ್ತು ಎಸ್ಟಿಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ಎಲ್ಲ ನೇಮಕಾತಿ ಮೀಸಲಾತಿ ಹೆಚ್ಚಿಸುವಂತೆ ತಹಶೀಲ್ದಾರ ಮೂಲಕ ಸಿಎಮ್ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮೀಸಲಾತಿ ಕುರಿತು ಶೇ 50ಕ್ಕಿಂತ ಹೆಚ್ಚಿಸಬಾರದೆಂಬ ಸರಕಾರದ ಧೋರಣೆ ಸಮಂಜಸವಲ್ಲ. ಎಲ್ಲ ಸಮುದಾಯಗಳಿಗೂ ಮೀಸಲಾತಿ ಅವಶ್ಯವಿದೆ ಎಂದರು.
ದಲಿತ ಸಂಘಟನೆ ಪ್ರಮುಖ ಬಸವರಾಜ ತಳವಾರ ಮಾತನಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ನೂರು ದಿನ ಮೌನವಾಗಿ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸಿದರೂ ಸರಕಾರ ಮೌನಕ್ಕೆ ಶರಣಾಗಿದೆ. ಸಮುದಾಯದ ಕೂಗು ಕೇಳುವ ಸೌಜನ್ಯವೂ ಸರಕಾರ ಕಳೆದುಕೊಂಡಿದೆಯೇ ಎಂದ ಅವರು ನಾಗಮೋಹನದಾಸ್ ವರದಿ ಅನುಷ್ಠಾನಗೊಳಿಸುತ್ತಿಲ್ಲ. ಕೂಡಲೇ ಮೀಸಲಾತಿಗೆ ಕ್ರಮವಹಿಸಲು ಆಗ್ರಹಿಸಿದರು.
ಈ ವೇಳೆ ರಾಘು ಪೂಜಾರ, ಬಸವರಾಜ ತಳವಾರ, ಬಸವರಾಜ ಶಿರಣ್ಣವರ, ಮಹೇಶ ಅಡಗಲ್ಲ, ಕೃಷ್ಣ ಮಲ್ಲೂರ, ಜಗದೀಶ ತಳವಾರ ಹಾಗೂ ಪ್ರಮುಖರು ಇದ್ದರು