ಮುಂದಗೋಡ

ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ, ವ್ಯಕ್ತಿ ಲಾಕ್, 8 ಲಕ್ಷದ ಮೌಲ್ಯದ ಮಾಲು ವಶಕ್ಕೆ

ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ, ವ್ಯಕ್ತಿ ಲಾಕ್, 8 ಲಕ್ಷದ ಮೌಲ್ಯದ ಮಾಲು ವಶಕ್ಕೆ

                    ಮುಂಡಗೋಡ 21 : ಮುಂಡಗೋಡಿನ ಕೆ,ಎಸ್,ಆರಿ​‍್ಸ, ಬಸ್ ಡಿಪೋ ಹತ್ತಿರ ಚರಸ್ ಎಂಬುವ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿತನಾದ ಪಟ್ಟಣದ ಸುಭಾಷ್ ನಗರದ ಸಚಿನ್ ಟೇಕಬಹುದ್ದೂರ ಗೋರ್ಖಾ (26) ಎಂಬುವವ ಮುಂಡಗೋಡಿನ ಹುಬ್ಬಳ್ಳಿ ರಸ್ತೆಯ ಕೆ,ಎಸ್,ಆರ್, ಟಿ,ಸಿ, ಬಸ್ ಡಿಪೋ ಹತ್ತಿರ ಹಿರೋ ಕಂಪನಿಯ ಕಪ್ಪು ಬಣ್ಣದ ಸ್ಪ್ಲೆಂಡರ್ ಬೈಕ್ ಮೇಲೆ  ಚರಸ್ ಮಾದಕ ವಸ್ತುವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದಾಗ ಇಲ್ಲಿಯ ಪೋಲಿಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

                ಬಂಧಿತನಿಂದ ಸುಮಾರು 8 ಲಕ್ಷ ರೂ.ಬೆಲೆ ಬಾಳುವ 781ಗ್ರಾಂ ತೂಕದ ಚರಸ್ ಹಾಗೂ ಚರಸ್ ಮಾರಾಟಕ್ಕೆ ಬಳಸಿದ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಅಧೀಕ್ಷಕರು ದೀಪನ್ ಎಮ್‌.ಎನ್ ಐ.ಪಿ.ಎಸ್ , ಕೃಷ್ಣಮೂರ್ತಿ ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಗೀತಾ ಪಾಟೀಲ ಡಿ.ಎಸ್‌.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಅಕ್ರಮ ಚರಸನ್ನು ಸಾಗಾಟ ಮಾಡುವ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಸಿ ಪಿ ಐ ರಂಗನಾಥ ನೀಲಮ್ಮನವರ , ಪಿಎಸ್‌ಐ ಯಲ್ಲಾಲಿಂಗ ಕುನ್ನೂರ , ಹಾಗೂ ಸಿಬ್ಬಂದಿಗಳಾದ ಕೋಟೇಶ್ವರ ನಾಗರವಳ್ಳಿ , ಮಹಾಂತೇಶ ಮುಧೋಳ ,ಅಣ್ಣಪ್ಪ ಬುಡಿಗೇರ , ಶಿವಾನಂದ ದಾನಣ್ಣವರ ,ಅನ್ವರ ಬಮ್ಮಿಗಟ್ಟಿ , ಮುಂಡಗೋಡ ಪೊಲೀಸ್ ಠಾಣೆರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ