ಮನೆಗೆ ಬೆಂಕಿ: ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆ ಸಾವು
ಮುಂಡಗೋಡ 16 :ತಾಲೂಕಿನ ಹನಮಾಪೂರ ಗ್ರಾಮದಲ್ಲಿ ಬೆಂಕಿ ತಗುಲಿ ವೃದ್ಧೆಯೊರ್ವಳು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬಳು ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ವೃದ್ದೆ ಸಾವನ್ನಪ್ಪಿದ್ದಾಳೆ. ಮೃತಪಟ್ಟ ವೃದ್ಧೆಯನ್ನು ಫಕ್ಕಿರಾ್ಪ ಆಲೂರ (70) ಎಂದು ತಿಳಿದು ಬಂದಿದೆ. ಮನೆಯಲ್ಲಿ ವೃದ್ಧೆ ಫಕ್ಕರವ್ವಾ ವಾಸಿಸು ತಿದ್ದಳು ಎಂದು ಹೇಳಲಾಗುತ್ತಿದೆ.ಪ್ರತಿ ರಾತ್ರಿಯು ದೀಪವನ್ನು ಹೆಚ್ಚಿಕೊಂಡು ಮಲಗುತ್ತಿದ್ದ ಫಕ್ಕಿರವ್ವಾ ಶುಕ್ರವಾರ ರಾತ್ರಿ ನಿದ್ದೆ ಜಾರಿದ ನಂತರ ಅಕಸ್ಮಿಕವಾಗಿ ದೀಪದಿಂದ ಹತ್ತಿರುವ ಬೆಂಕಿ ವೃದ್ಧೆಯನ್ನು ಆವರಿಸಿಕೊಂಡಿದೆ. ಬೆಂಕಿಯಲ್ಲಿ ಬೆಂದು ಹೋಗಿದ್ದ ವೃದ್ದೆಯು ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.