ಅಲೆತಡೆ ಗೋಡೆಗೆ ಗ್ರೀನ್ ಸಿಗ್ನಲ್
ನಾಗರಾಜ ಹರಪನಹಳ್ಳಿ
ಕಾರವಾರ 22: ಸರ್ವರುತು ಬಂದರು ಎಂದೇ ಹೆಸರಾದ ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ನಿಮರ್ಾಣಕ್ಕೆ ಮುನ್ನುಡಿ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಬಂದರು ವಿಸ್ತರಣೆಗೆ ಅವಶ್ಯವಾದ ಅಲೆ ತಡೆಗೋಡೆ (ಬ್ರೇಕ್ ವಾಟರ್) ನಿಮರ್ಾಣಕ್ಕೆ ಈಗಾಗಲೇ ರಾಜ್ಯ ಪರಿಸರ ಹಾನಿ ಅಂದಾಜೀಕರಣ ತಜ್ಞರ ಸ"ುತಿ ಪ್ರಾಥಮಿಕ ಹಂತದ ಒಪ್ಪಿಗೆ ನೀಡಿದೆ.
ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಸರಕು ಸಾಗಾಣಿಕೆ ಹಡಗುಗಳ ಸಂಚಾರ ಹೆಚ್ಚುತ್ತಿದ್ದು ಆಮದು ಮತ್ತು ರಫ್ತು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ಮುಂಬಯಿ,ಗೋವಾ ಮತ್ತು ನವಮಂಗಳೂರು ವಾಣಿಜ್ಯ ಬಂದರುಗಳ ವಹಿವಾಟು ವೇಗ ಹಾಗೂ ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾರವಾರ ಬಂದರು 5 ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಈಗ ಸಕರ್ಾರವೇ ಬಂದರು ವಿಸ್ತರಣೆಗೆ ಮುಂದಾಗಿದೆ. ಸಂಬಂಧಿಸಿದ ಅಧ್ಯಯನಗಳು ಮುಗಿದಿವೆ. ಬಜೆಟ್ನಲ್ಲಿ ಅನುದಾನವೂ ಸಿಕ್ಕಿದೆ. ಅನುಷ್ಠಾನ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಂದರು ವಿಸ್ತರಣೆಗೆ ಒಳನಾಡು ಜಲಸಾರಿಗೆ ಮತ್ತು ಬಂದರು ಇಲಾಖೆಯು 1170 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು.
ಆ ನಂತರ 2018ರ ಪ್ರಾರಂಭದಲ್ಲೇ ಫೆ.9ರಂದು ಕಾರವಾರ ಬಂದರಿನಲ್ಲಿ ಸಾರ್ವಜನಿಕ ಅಹವಾಲು ಸಭೆ ಸಹ ನಡೆದುಹೋಗಿದೆ. ಆಗ ಕೆಲವರು ಬಂದರು ವಿಸ್ತರಣೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಪರಿಸರದ ಕಾರಣ ನೀಡಿದರೆ, ಕೆಲವರು ಉದ್ಯೋಗದ ಬೇಡಿಕೆ ಇಟ್ಟಿದ್ದರು. ಬೈತಖೋಲ ನಿವಾಸಿಗಳು ಈಗಿನ ಮಾರುಕಟ್ಟೆ ದರಕ್ಕೆ ಅನ್ವಯಿಸಿ ಹೊಸದಾಗಿ ಪರಿಹಾರ ನೀಡಬೇಕೆಂಬ ಬೇಡಿಕೆ ಸಹ ಸಲ್ಲಿಸಿದ್ದರು. ಆ ಬಳಿಕ ನಾಗಣ್ಣ ಅವರ ಅಧ್ಯಕ್ಷತೆಯ 13 ಸದಸ್ಯರ ಸಮಿತಿ ಇದೇ ಡಿ.3ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಪರಿಸರ ಹಾನಿ ವರದಿ ಹಾಗೂ ಸಾರ್ವಜನಿಕ ಅಹವಾಲು ಸಭೆಯ ಅಂಶಗಳನ್ನು ಸಭೆಯಲ್ಲಿ ಚಚರ್ಿಸಲಾಗಿದೆ.
ಬಂದರು ವಿಸ್ತರಣೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಚೆನ್ನೈನ ಖಾಸಗಿ ಕಂಪನಿ ವರದಿ ಸಿದ್ಧಪಡಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಯೋಜನೆಗೆ ಪ್ರಾಥಮಿಕ ಒಪ್ಪಿಗೆ ಸೂಚಿಸಲಾಗಿದೆ. ಆದರೆ, ಕೆಲವು ಸ್ಪಷ್ಟನೆಗಳನ್ನು ಸಮಿತಿ ಕೇಳಿದ್ದು, ಮಾಹಿತಿ ಪೂರೈಸುವಂತೆ ಬಂದರು ಇಲಾಖೆಗೆ ಕೇಳಲಾಗಿದೆ. ನಂತರ ಪರಿಸರ ಹಾನಿ ಅಂದಾಜೀಕರಣ ಪ್ರಾಧಿಕಾರಕ್ಕೆ ಕಡತಗಳು ರವಾನೆಯಾಗಲಿವೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂದರು ವಿಸ್ತರಣೆಯ ನೀಲ ನಕಾಶೆ :
ಬೈತಖೋಲ್ ಬಂದರಿನ ವಿಸ್ತರಣೆಯಿಂದ ಏಕಕಾಲದಲ್ಲಿ ಐದು ಹಡಗುಗಳು ನಿಲ್ಲಲು ವ್ಯವಸ್ಥೆ ಅನುಕೂಲ ಮಾಡುವುದು, ಹೊಸದಾಗಿ ಗೋದಾಮುಗಳನ್ನು ನಿಮರ್ಿಸುವುದು, ಹಾಗೂ 1,160 ಮೀಟರ್ ಉದ್ದದ ಹೊಸ ಅಲೆ ತಡೆಗೋಡೆ ನಿಮರ್ಾಣ ಕಾಮಗಾರಿಗಳು ಯೋಜನೆಯಲ್ಲಿ ಸೇರಿವೆ. 125 ಕೋಟಿ ರೂ. ವೆಚ್ಚದ 880 ಮೀಟರ್ ಜಟ್ಟಿ ವಿಸ್ತರಣೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮುಂಬೈನ ಡಿಟಿಇ ಕಂಪನಿ ಟೆಂಡರ್ ಪಡೆದುಕೊಂಡಿದೆ.
ವಾಕ್ಪಾಥ್ :
ಯೋಜನೆಯ ಪ್ರಕಾರ ಅಲೆ ತಡೆ ಗೋಡೆ ಇಲ್ಲಿನ ಟ್ಯಾಗೋರ್ ಬೀಚ್ನ ನಗರಸಭೆ ಉದ್ಯಾನದ ತುದಿಯಿಂದ ಪ್ರಾರಂಭವಾಗಲಿದೆ. ಉದ್ಯಾನದ ಪಕ್ಕದಿಂದ ಪೂರ್ವ ಭಾಗಕ್ಕೆ ಅಲೆ ತಡೆಗೋಡೆ ನಿಮರ್ಾಣ ಆಗಲಿದೆ. ಅಲೆತಡೆಗೋಡೆಯ ಮೇಲೆ ವಾಕ್ ಮಾಡುವಂತೆ ಯೋಜನೆ ರೂಪಿಸಲಾಗಿದ್ದು, ಸಮುದ್ರದಲ್ಲಿ ವಾಕ್ ಪಾಥ್ ಅಲೆ ತಡೆಯಗೋಡೆಯಲ್ಲೇ ಒಳಗೊಂಡಿದೆ. ಇದು ಪ್ರವಾಸಿಗರ ಮತ್ತೊಂದು ಆಕರ್ಷಣೆಯಾಗಲಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 