ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಣೆ
ಮೂಡಲಗಿ 27: ಗ್ರಾಮೀಣ ವಲಯದ ಸಕರ್ಾರಿ ಶಾಲೆಗಳು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಇತ್ತಿಚಿಗೆ ನಡೆದ ಸನ್ 2017-18 ನೇ ಸಾಲಿನ 8 ನೇ ತರಗತಿಯ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಸೈಕಲ್ ಹೀಗೆ ಹತ್ತು ಹಲವು ಯೋಜನೆಗಳನ್ನು ಶಾಲಾ ಮಕ್ಕಳಿಗೆಗಾಗಿ ಸಕರ್ಾರ ಜಾರಿಗೆ ತಂದಿದ್ದು, ಶಾಲಾ ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಕುತುಬು ಮಿಜರ್ಾನಾಯ್ಕ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ನ್ಯಾಯವಾದಿ ಎಮ್.ಐ.ನೀಲಣ್ಣವರ ಮುಖ್ಯ ಅತಿಥಿಗಳಾಗಿ, ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ 2017-18 ನೇ ಸಾಲಿನ ಶಾಲೆಯ 8 ನೇ ತರಗತಿಯ ಒಟ್ಟು 196 ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು.
ಈರಯ್ಯ ಹಿರೇಮಠ, ಶಿವಾಜಿ ನೀಲಣ್ಣವರ, ಶ್ರೀಶೈಲ ಗಾಣಗಿ, ವೀರಸಂಗಪ್ಪ ದೇಯಣ್ಣವರ, ಬಸಪ್ಪ ದೇಯಣ್ಣವರ, ಅಜ್ಜಪ್ಪ ಪೇದನ್ನವರ, ಶಾಲೆಯ ಎಸ್ಡಿಎಮ್ಸಿ ಸದಸ್ಯರು, ಶಿಕ್ಷಣಪ್ರೇಮಿಗಳು, ಶಿಕ್ಷಕರು, ಸಿಬ್ಬಂದಿ, ಮತ್ತೀತರರು ಇದ್ದರು.
ಮಂಜುನಾಥ ಹತ್ತಿ ಸ್ವಾಗತಿಸಿದರು. ಮೋಹನ ತುಪ್ಪದ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾಜರ್ುನ ಹಿರೇಮಠ ವಂದಿಸಿದರು.