ಉಚಿತ ದಂತ ಪರೀಕ್ಷೆ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ: ಮಕ್ಕಳದಿನಾಚರಣೆ ಅಂಗವಾಗಿ ಇತ್ತೀಚೆಗೆ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯದ ಸಮುದಾಯ ದಂತ ಚಿಕೀತ್ಸಾ ವಿಭಾಗವು ಹುಕ್ಕೇರಿ ತಾಲೊಕಿನ ಯಮಕನಮರಡಿ ವಿದ್ಯಾವರ್ದಕ ಸಂಘದ ಪ್ರೌಢಶಾಲೆಯಲ್ಲಿ ಶಾಲಾಮಕ್ಕಳಿಗೆ ಉಚಿತ ದಂತ ತಪಾಸಣಯನ್ನ ಆಯೋಜಿಸಿತ್ತು. ಶಿಬಿರದಲ್ಲಿ ಒಟ್ಟು 728 ವಿದ್ಯಾಥರ್ಿಗಳಿಗೆ ಬಾಯಿ ಪರೀಕ್ಷೆ, ದಂತಕುಳಿ, ಬಾಯಿಸ್ವಚ್ಚತೆ ಕುರಿತು ತಪಾಸಣೆ ನಡೆಸಿ ಅವುಗಳ ಬಗ್ಗೆ ತಿಳುವಳಿಕೆ ನೀಡಲಾಯಿತು ಮತ್ತು ಹೆಚ್ಚಿನ ಚಿಕೀತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯ ಹಾಗು ಅದರ ಸಂಭಂದಿಸಿದ ಚಿಕಿತ್ಸಾಲಯಗಳಿಗೆ ಭೇಟಿಕೊಡುವಂತೆ ತಿಳಿಸಲಾಯಿತು.
ಶಿಬಿರದಲ್ಲಿ ಸಮುದಾಯ ದಂತ ಚಿಕೀತ್ಸಾ ವಿಭಾಗದ ಡಾ.ಮಹಾಂತೇಶ ಸಿದ್ದಿಬಾವಿ, ಡಾ.ದಾನೇಶ್ವರಿ ಕೋಸ್ತಿ, ಡಾ.ತೇಜಸ್ ಶೆಷಗಿರಿ, ಡಾ.ರೋಷನ್, ಡಾ.ನೊಯಲ್, ಡಾ.ಶ್ವೇತ, ಡಾ.ಮನಿಷಾ ಆಸ್ನಾ, ಡಾ.ತನುಜ ಮುಂತಾದವರು ಬಾಗವಹಿಸಿ ದಂತ ತಪಾಸಣೆಮಾಡಿ ಶಿಬಿರವನ್ನ ಯಶಸ್ವಿಗೊಳಿಸಿದರು. ಶಾಲೆಯ ಉಪಾಧ್ಯಯರುಗಳು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 