ವುಡ್ ಇಂಡಸ್ಟ್ರೀಜಗೆ ಅಗ್ನಿ ದುರಂತ : ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮ
ಮುಂಡಗೋಡ 07: ವುಡ್ ಇಂಡಸ್ಟ್ರೀಜಗೆ ಅಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಸಾಗವಾನಿ ಕಟ್ಟಿಗೆ ಹಾಗೂ ಯಂತ್ರಗಳು ನಾಶವಾದ ಘಟನೆ ಪಟ್ಟಣದ ಕಿಲ್ಲೆ ಓಣಿಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ವುಡ್ ಇಂಡಸ್ಟ್ರೀಜ ಮಾಲಿಕನನ್ನು ಯೂಸೂಫ್ ಹೊಸಕೊಪ್ಪ (ಸಾಗರ)ಎಂದು ತಿಳಿದು ಬಂದಿದೆ.ಕಟ್ಟಿಗೆಯಿಂದ ವಿವಿಧ ನಮೂನೆ ಪಿಠೋಪಕರಣಗಳನ್ನು ಮಾಡಿ ಮಾರಾಟ ಮಾಡುತ್ತಿದ್ದ ಯೂಸೂಫ್ ಸಾಗವಾನಿಕಟ್ಟಿಗೆಯಿಂದ ಹೊಸ ಹೊಸ ನಮೂನೆಯ ಪಿಠೋಪಕರಣ ಮಾಡುತ್ತಿದ್ದರಿಂದ ತಾಲೂಕಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತನು ಮಾಡುವ ಸಾಗವಾನಿ ಉಪಕರಣಗಳಿಗೆ ಭಾರಿ ಬೇಡಿಕೆ ಇದೆ.
ಭಾನುವಾರ ಬೆಳಗಿನ ಜಾವ ವುಡ್ ಇಂಡಸ್ಟ್ರೀಜ್ ಬೆಂಕಿ ತಗುಲಿದೆ ಫರ್ನಿಚರ ಮಾಡಲು ಸಂಗ್ರಹಿಸಿದ ಹಾಗೂ ಫರ್ನಿಚರ ಮಾಡಲು ಹಲವರು ಕೊಟ್ಟಿರುವ ಕಟ್ಟಿಗೆ ಎಲ್ಲವೂ ಬೆಂಕಿ ಪಾಲಾಯಿತು. ಇಂಡಸ್ಟ್ರೀಜನಲ್ಲಿ ಯೂಸೂಫ್ ಹೊಸಕೊಪ್ಪ(ಸಾಗರ) ಕಣ್ಣಿರು ಹಾಕಿದ್ದಾರೆ. ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ಹೊತ್ತಿಗೆ ಇಂಡಸ್ಟ್ರೀಜ್ ನಲ್ಲಿದ್ದ ಕಟ್ಟಿಗೆ ಹಾಗೂ ಮಶಿನಗಳು ಉರಿದು ಬೂದಿಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟೀನೀಡಿ ಪರೀಶೀಲಿಸಿದ್ದಾರೆ. ವಾರ್ಡನ್ ಮೊಹಮ್ಮದಗೌಸ ಮಕಾನದಾರ ಭೇಟೀನೀಡಿ ಯೂಸೂಫ್ ಹೊಸಕೊಪ್ಪಗೆ ಧೈರ್ಯ ತುಂಬಿದ್ದಾರೆ.