ರಷ್ಯಾದ ರಿಪಬ್ಲಿಕ್ ಆಫ್ ಬುರಿಯಾಟಿಯಾದಲ್ಲಿ ಭೂಕಂಪನ
ಇರ್ಕುಟ್ಸ್ಕ್, ಡಿಸೆಂಬರ್ 10: ರಷ್ಯಾದ ಬುರಿಯಾಷಿಯಾ ಗಣರಾಜ್ಯದಲ್ಲಿ ಗುರುವಾರ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ. ರಿಕ್ಟರ್ ಮಾಪನದಲ್ಲಿ 5.5 ಎಂದು ದಾಖಲಾಗಿದೆ ಎಂದು ನೆರೆಯ ಇರ್ಕುಟ್ಸ್ಕ್ ಪ್ರದೇಶದ ತುರ್ತು ಸಚಿವಾಲಯದ ಪ್ರಾದೇಶಿಕ ವಿಭಾಗ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಬುರಿಯಾಷಿಯಾ ಗಣರಾಜ್ಯದ ಕಬನ್ಸ್ಕಿ ಜಿಲ್ಲೆಯಲ್ಲಿತ್ತು ಎಂದು ಸಚಿವಾಲಯ ತಿಳಿಸಿದೆ. ಕಂಪನದಿಂದ ಯಾವುದೇ ಹಾನಿ ಅಥವಾ ಜೀವಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ ಬುರಿಯಾಷಿಯಾ ಗಣರಾಜ್ಯವು ಬೈಕಲ್ ರಿಫ್ಟ್ ವಲಯದ ಸಮೀಪ ಭೂಕಂಪ ಶಾಸ್ತ್ರೀಯವಾದ ಸಕ್ರಿಯ ಪ್ರದೇಶದಲ್ಲಿದೆ, ಇದು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ ಮತ್ತು ಅಮುರ್ ಪ್ಲೇಟ್ ಅನ್ನು ಬೇರ್ಪಡಿಸುತ್ತದೆ ಮತ್ತು ಆಗಾಗ್ಗೆ ಪ್ರಬಲ ಭೂಕಂಪಗಳನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.