ದುಗರ್ಾದೇವಿ ಜಾತ್ರೆಗೆ ಅದ್ದೂರಿ ಚಾಲನೆ
ಲೋಕದರ್ಶನ ವರದಿ
ಹಾವೇರಿ28: ತಾಲೂಕಿನ ಹನುಮನಹಳ್ಳಿ ಗ್ರಾಮದ ದುಗರ್ಾದೇವಿ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶುಕ್ರವಾರ ಸಂಜೆ 8.00ಕ್ಕೆ ಅಲಂಕಾರಗೊಂಡ ವಾಹನದಲ್ಲಿ ದೇವಿಯನ್ನು ಶೃಂಗರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮುಖಾಂತರ ಸಾಗಿ ನಂತರ ದುಗರ್ಾದೇವಿ ದೇವಸ್ಥಾನ ತಲುಪಿ ದೇವಿಯನ್ನು ಪ್ರತಿಷ್ಠಾಪಿಸಿ ಊಡಿ ತುಂಬುವ ಕಾರ್ಯಕ್ರಮ ಜರುಗಿತು.
ಮರುದಿನ ಶನಿವಾರ ದಿವಸ ಸಾಯಂಕಾಲದವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುವ ತಾಯಿಗೆ ಊರಿನ ಗ್ರಾಮಸ್ಥರು ಪೂಜಾ ಕೈಂಕರ್ಯ ಕೈಗೊಂಡು ದೇವಿಗೆ ನೈವೇದ್ಯವನ್ನು ಅಪರ್ಿಸಿದರು.
ಮನ ಸಳೆದ ಸಿಡಿಮದ್ದಿನ ಪ್ರದರ್ಶನ: ಮೇರವಣಿಗೆಯಲ್ಲಿ ತಮಷಾ ಮದ್ದಿನ ಆರ್ಭಟ ನೋಡುಗರ ಮನ ಸೆಳೆಯಿತು ಜೊತೆಗೆ ರಾಣೇಬೆನ್ನೂರಿನ ಶಾರದಾ ಆಕರ್ೆಸ್ಟ್ರಾ ಸೌಂಡ್ ಸಿಸ್ಟಮ್ ಆಯೋಜಿಸಿದ ಸಂಗೀತ ಕಾರ್ಯಕ್ರಮದ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಯುವ ಸಮೂಹ ಸಂಭ್ರಮಿಸಿತು.
ಜಾತ್ರೆಯ ಮೆರವಣಿಗೆಯಲ್ಲಿ ಗ್ರಾಮದ ಮುಖಂಡರಾದ ಶಿವನಗೌಡ ಲೆಕ್ಕನಗೌಡ್ರ, ಬಸವರಾಜ ರಿತ್ತಿ, ಕನಕಪ್ಪ ದಾಸಣ್ಣನವರ, ಸುನೀಲ್ ಬಂಕಾಪುರ, ಶ್ರೀಕಾಂತ ಹನುಮಗೌಡ್ರ ಸೇರಿದಂತೆ ಗುರು- ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 