ತಡರಾತ್ರಿ ಚೆಕ್ಪೋಸ್ಟ್ಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭೇಟಿ ನೀಡಿ ಪರಿಶೀಲನೆ
ಹಾವೇರಿ: ಲೋಕಸಭಾ ಚುನಾವಣೆಯ ಅಕ್ರಮಗಳ ಮೇಲೆ ನಿಗಾ ವಹಿಸಲು ಸ್ಥಾಪಿಸಲಾದ ಚೆಕ್ ಪೋಸ್ಟ್ಗಳಿಗೆ ಗುರುವಾರ ತಡರಾತ್ರಿ ಅನಿರೀಕ್ಷಿತ ಭೇಟಿ ನೀಡಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಚೆಕ್ಪೋಸ್ಟ್ಗಳ ನಿಯೋಜಿತ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಗುರುವಾರ ತಡರಾತ್ರಿ ಹನ್ನೆರಡುವರೆ ಸಮಯದ ಸಂದರ್ಭದಲ್ಲಿ ತೋಟದ ಯಲ್ಲಾಪುರ ಚೆಕ್ ಪೋಸ್ಟ್, ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಹತ್ತಿರ ಸ್ಥಾಪಿಸಿದ ಚೆಕ್ ಪೋಸ್ಟ್, ಮೋಟೆಬೆನ್ನೂರ, ಗುತ್ತಲ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.
ಯಾವುದೇ ಅಕ್ರಮಗಳಿಗೆ ಅವಕಾಶವಿರಬಾರದು, ಕಟ್ಟೆಚ್ಚರದಿಂದ ವಾಹನಗಳ ಚಲನವಲನಗಳ ಬಗ್ಗೆ ನಿಗಾವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಮುಜಗರವಾದಂತೆ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಚೆಕ್ ಪೋಸ್ಟ್ಗಳ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಜಿಲ್ಲೆಯ ಹಾನಗಲ್ ತಾಲೂಕಿನ ಹಳ್ಳಿಬೈಲ್, ಗೊಂದಿ, ಕೊಪ್ಪರಸಿಕೊಪ್ಪ, ಸಮ್ಮಸಗಿ, ಶಿಗ್ಗಾಂವ ತಾಲೂಕಿನ ತಡಸ, ಬಂಕಾಪುರ ಮತ್ತು ಮುಂಡಗೋಡ, ಪಾನಿಗಟ್ಟಿ, ರಾಮನಕೊಪ್ಪ, ಸವಣೂರ ತಾಲೂಕಿನ ಯಲವಿಗಿ, ಹಾವೇರಿ ತಾಲೂಕಿನ ಕಂಚಾರಗಟ್ಟಿ, ತೆರದಹಳ್ಳಿ, ಹಾವೇರಿ ಆರ್.ಟಿ.ಓ, ತೋಟದ ಯಲ್ಲಾಪುರ, ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ, ಕುಮ್ಮೂರ ಕ್ರಾಸ್, ಮೋಟೆಬೆನ್ನೂರ, ಹಿರೆಕೇರೂರು ತಾಲೂಕ ಕೋಡಮಗ್ಗಿ, ಹಳ್ಳೂರ, ಹೊಳೆಬೈಕೊಂಡ, ರಾಣೇಬೆನ್ನೂರು ತಾಲೂಕು ಮಾಕನೂರ ಕ್ರಾಸ್, ರಾಣೇಬೆನ್ನೂರು ಜಾನುವಾರು ಮಾರುಕಟ್ಟೆ-ಪಿ. ಪಿ.ಬಿ.ರಸ್ತೆ, ಹೆಡಿಯಾಳ (ಹಲಗೇರಿ ಮತ್ತು ಹಂಸಭಾವಿ ರಸ್ತೆ), ಹರನಗಿರಿ ಬ್ರಿಡ್ಜ ಚೆಕ್ಪೋಸ್ಟ್ ಒಳಗೊಂಡಂತೆ 23 ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ. ಮೂರು ಪಾಳೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 