ಹಿರಿಯ ನಾಯಕ ವಿ.ಎಸ್‌.ಉಗ್ರ​‍್ಪಗೆ ರಾಜ್ಯಸಭಾ ಟಿಕೆಟ್ ನೀಡಲು ಮಹೇಶ್ ಶೀಗಿಹಳ್ಳಿ ಮನವಿ

ಹಿರಿಯ ನಾಯಕ ವಿ.ಎಸ್‌.ಉಗ್ರ​‍್ಪಗೆ ರಾಜ್ಯಸಭಾ ಟಿಕೆಟ್ ನೀಡಲು ಮಹೇಶ್ ಶೀಗಿಹಳ್ಳಿ ಮನವಿ Mahesh Sheegihalli requests senior leader V.S. Ugrapa to be given a Rajya Sabha ticket

ಬೆಳಗಾವಿ 01 : ಮಾಜಿ ಸಂಸದ ಹಾಗೂ ಕಾನೂನು ತಜ್ಞರಾದ ವಿ. ಎಸ್‌. ಉಗ್ರ​‍್ಪ ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹೈಕಮಾಂಡ್ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಎಸ್‌. ಉಗ್ರ​‍್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರಾದ ಮಹೇಶ್ ಶೀಗಿಹಳ್ಳಿ ಮನವಿ ಮಾಡಿರುತ್ತಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ಇಡೀ ರಾಜಕೀಯ ಜೀವನವನ್ನು ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗಾಗಿ ಮುಡುಪಾಗಿಟ್ಟಿರುವ ಉಗ್ರ​‍್ಪ ಅವರಿಗೆ ಸಂಸತ್ತಿನ ಮೇಲ್ಮನೆಯಲ್ಲಿ ಪ್ರಾತಿನಿಧ್ಯ ನೀಡುವುದು ಸಕಾಲಿಕ ಮತ್ತು ನ್ಯಾಯಸಮ್ಮತವಾಗಿದೆ. 

 ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದರೂ, ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಈ ಸಮುದಾಯಕ್ಕೆ ರಾಜ್ಯಸಭಾ ಮಟ್ಟದಲ್ಲಿ ಸಮರ​‍್ಕ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಎಸ್ಟಿ ಸಮುದಾಯದ ಅತ್ಯಂತ ಸಮರ್ಥ, ಪ್ರಾಮಾಣಿಕ ಹಾಗೂ ಜನಪರ ನಾಯಕರಾಗಿರುವ ವಿ. ಎಸ್‌. ಉಗ್ರ​‍್ಪ ಅವರಿಗೆ ಈ ಬಾರಿ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಐತಿಹಾಸಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಉಗ್ರ​‍್ಪ ಅವರು ದಶಕಗಳಿಂದ ದಲಿತರು, ಆದಿವಾಸಿಗಳು ಹಾಗೂ ಒಬಿಸಿ ಸಮುದಾಯಗಳ ಪರವಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾದ ಅನುದಾನ ದುರುಪಯೋಗವಾಗುವುದನ್ನು ತಡೆದು, ನಿಜವಾದ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸಿದ್ದಾರೆ.  

ಅಷ್ಟೇ ಅಲ್ಲದೆ, ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ವಸತಿ ಸೌಲಭ್ಯ ಹಾಗೂ ಉದ್ಯೋಗ ತರಬೇತಿಯಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಸಂವಿಧಾನಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳ ವಿರುದ್ಧ ಸ್ಪಷ್ಟ ನಿಲುವು ಮೂಲಕ ಶೋಷಿತರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಗ್ರ​‍್ಪ ಅವರು ಮಾಡಿದ ಕೆಲಸ ಜನಮಾನಸದಲ್ಲಿ ಹಸಿರಾಗಿ ಉಳಿಯುವಂತದ್ದು. 

 ಆ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಸುಮಾರು 5,000 ಪುಟಗಳ ಸಮಗ್ರ ವರದಿಯನ್ನು 135ಕ್ಕೂ ಹೆಚ್ಚು ಕ್ರಾಂತಿಕಾರಿ ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದರು.ನಿರ್ಭಯಾ ನಿಧಿಯ ಬಳಕೆ, ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮತ್ತು ಮಹಿಳಾ ಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಅವರು ನೀಡಿದ ವರದಿ ಮಹಿಳಾ ಸುರಕ್ಷತೆಯ ಬಗೆಗಿನ ಅವರ ಬದ್ಧತೆಗೆ ಕೈಗನ್ನಡಿಯಾಗಿದೆ. ಪ್ರಸ್ತುತ ದೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಸಂಸ್ಕೃತಿಯಲ್ಲಿ ಆಡಳಿತ ವೈಫಲ್ಯಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಕಾನೂನು ಆಧಾರಿತ, ಪ್ರಬಲ ವಾದ ಮಂಡಿಸುವ ನಾಯಕರ ಅಗತ್ಯವಿದೆ. ಉಗ್ರ​‍್ಪ ಅವರ ವಾಗ್ಮಿತ್ವ ಮತ್ತು ಸಂಸದೀಯ ಅನುಭವವು ದೇಶದ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಶಕ್ತಿ ತುಂಬಬಲ್ಲದು. ಆದ್ದರಿಂದ, ವಾಲ್ಮೀಕಿ ನಾಯಕ ಸಮುದಾಯದ ಆಶಯಗಳು ಮತ್ತು ಸಾಮಾಜಿಕ ನ್ಯಾಯದ ಹೋರಾಟವನ್ನು ಗೌರವಿಸಿ, ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ವಿ. ಎಸ್‌. ಉಗ್ರ​‍್ಪ ಅವರಿಗೆ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ದೃಢವಾಗಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರಾದ ಮಹೇಶ್ ಶೀಗಿಹಳ್ಳಿ ತಿಳಿಸಿದ್ದಾರೆ.