ನಗರಸಭೆಯಲ್ಲಿ ಭ್ರಷ್ಟಾಚಾರ : ಆರೋಪ ಸಿಬಿಐ ತನಿಖೆಗೆ ನವ ನಿರ್ಮಾಣ ಸೇನೆ ಆಗ್ರಹ

ನಗರಸಭೆಯಲ್ಲಿ ಭ್ರಷ್ಟಾಚಾರ : ಆರೋಪ ಸಿಬಿಐ ತನಿಖೆಗೆ ನವ ನಿರ್ಮಾಣ ಸೇನೆ ಆಗ್ರಹ Corruption in the Municipal Council: Nav Nirman Sena demands CBI investigation into allegations

ಕೊಪ್ಪಳ 01: ಕೊಪ್ಪಳ ನಗರಸಭೆಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ತಾಂಡವವಾಡುತ್ತಿದೆ ಕೊಪ್ಪಳ ನಗರದ ಜನತೆಯ ಆಶೋತ್ತರಗಳು ಹಾಗೂ ನೀರಿಕ್ಷೆಗಳನ್ನು ಪೂರೈಸುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದವರು ನಗರಸಭೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ತನಿಖೆ ಕೈಗೊಳ್ಳಲು ಸಿಬಿಐಗೆ ವಹಿಸಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷರಾದ ವಿಜಯಕುಮಾರ್ ಕವಲೂರು ರವರು ಆಗ್ರಹ ಪಡಿಸಿದ್ದಾರೆ. ಅವರು ಸೋಮವಾರ ಇಲ್ಲಿನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಆರೋಪಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ ಅವರು ಕೂಡಲೇ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು, ಮುಂದುವರೆದು ಮಾತನಾಡಿ  ಈ ಹಿಂದಿನಿಂದಲೂ ನಗರಸಭೆಯಲ್ಲಿ ಬ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇವೆ. ಕೇವಲ ಒಂದು ವರ್ಷದಲ್ಲಿ ಎರಡು ಬಾರಿಲೋಕಾಯುಕ್ತರು ದಾಳಿ ಮಾಡಿ ಹತ್ತು ಕೋಟಿಗೂ ಅಧಿಕ ಹಣದ ಬ್ರಷ್ಟಾಚಾರ ನಡೆದಿದೆ ಎಂದು ದೂರುಗಳು ದಾಖಲಾಗಿವೆ. ಇಷ್ಟೆಲ್ಲ ಆದರೂ ಕೂಡ ನಗರಸಭೆ ಅಧಿಕಾರಿಗಳು ತಮ್ಮ ಭಂಡತನದ ಭ್ರಷ್ಟಾಚಾರವನ್ನು ಮುಂದುವರೆಸಿದ್ದಾರೆ.  

ನಮಗೆ ಸಿಕ್ಕ ದಾಖಲೆಗಳ ಪ್ರಕಾರ ಮೂರು ತಿಂಗಳಲ್ಲಿ ನಗರಸಭೆ ನಿಧಿಯಿಂದ ಒಂದು ಕೋಟಿಗೂ ಅಧಿಕ ಹಣ ನಗರಸಭೆಯ ಬೇರೆ ಬೇರೆ ನಿಧಿಯಿಂದಿ ಮೂರು ಕೋಟಿಗೂ ಅಧಿಕ ಹಣದ ಚೆಕ್ ಬರೆದು ಒಟ್ಟಾರೆಯಾಗಿ ಕೇವಲ ಮೂರು ತಿಂಗಳಲ್ಲಿ ನಾಲ್ಕು ಕೋಟಿಗೂ ಹಣ ತಮಗೆ ಇಷ್ಟ ಬಂದಂತೆ ಖರ್ಚು ಮಾಡಿದ್ದಾರೆ. ಜನರ ತೆರಿಗೆ ಹಣವನ್ನು ತಮಗೆ ಇಷ್ಟ ಬಂದಂತೆ ಬಳಸಿದ್ದು ದುರಂತ ಹಾಗೂ ದುರದುಷ್ಟಕರ. ಒಂದು ಲಕ್ಷದ ಒಳಗಿನ ಕಾಮಗಾರಿಗಳು ಐದು ಲಕ್ಷದ ಒಳಗಿನ ಕಾಮಗಾರಿಗಳು ಹಾಗೂ ಐದು ಲಕ್ಷದ ಮೇಲಿನ ಕಾಮಗಾರಿಗಳಿಗೆ ಕ್ರೀಯಾ ಯೋಜನೆ ಮಾಡಬೇಕು, ಟೆಂಡರ್ ಕರೆಯಬೇಕು ಸ್ಥಳೀಯ ಹಾಗೂ ರಾಜ್ಯ ವ್ಯಾಪ್ತಿ  ಪತ್ರಿಕೆಗಳಿಗೆ ಪ್ರಕಟಣೆ ಕರೆಯಬೇಕು ಇಲ್ಲಿ ನಗರಸಭೆ ಅಧಿಕಾರಿಗಳು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಯಾವುದನ್ನು ಮಾಡದೇ ತಮಗೆ ಇಷ್ಟ ಬಂದ ವ್ಯಕ್ತಿಗಳಿಗೆ ತಮಗೆ ಇಷ್ಟ ಬಂದ ಏಜಿನ್ಸಿಗಳಿಗೆ ಕಾಮಗಾರಿಗಳನ್ನು ನೀಡಿ ಭ್ರಷ್ಟಾಚಾರ ಮಾಡಿದ್ದಾರೆ. 

ಕನ್ನಡ ರಾಜ್ಯೋತ್ಸವ, ಶ್ರೇಷ್ಠ ಸಂತ ಶ್ರೀ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮಗಳಿಗೆ ಮೂರು ಬಾರಿ ಬಿಲ್ಲು ಎತ್ತಿರುವುದು ಸ್ಪಷ್ಟವಾಗಿದೆ. ಅದೇ ರೀತಿಯಾಗಿ ರಿಪೇರಿ ಇದ್ದಂತಹ ಕಸ ವಿಲೇವಾರಿ ವಾಹನಗಳಿಗೆ ರಿಪೇರಿ ಖರ್ಚು ಹಾಕಿ ರಿಪೇರಿ ಇದ್ದಂತಹ ಕಸ ವಿಲೇವಾರಿ ವಾಹನಗಳಿಗೆ ಇಂಧನ ಹಾಕಿಸಿ ಅದಕ್ಕೂ ಕೂಡ ಬಿಲ್ಲ ಎತ್ತಿದ್ದಾರೆ. ನಗರಸಭೆಯ ನಲವತ್ತಕ್ಕೂ ಹೆಚ್ಚಿನ ವಾಹನಗಳಿಗೂ ಕೂಡ ಇಂಧನ ನೆಪದಲ್ಲಿ ತಿಂಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಬಂಕ್ ಮಾಲೀಕರಿಗೆ ಹಣ ಪಾವತಿಸಿದ್ದು ಇದನ್ನು ಗಮನಿಸಿದರೇ ಒಂದು ರೀತಿಯ ಇಂಧನ ಮಾಫೀಯಾವಾಗಿದೆ. ಕಸಸಂಗ್ರಹಣಾ ಘಟಕ ನಿರ್ಮಾಣ ಆದಾಗಿಂದಲೂ ಇಲ್ಲಿಯವರೆಗೆ ಕೋಟಿ ಕೋಟಿ ಹಣ ದುರುಪಯೋಗವಾಗಿದೆ. ಉದಾ: ಕಸಸಂಗ್ರಹಣಾ ಘಟಕದ ಯಂತ್ರ ಖರೀದಿ ಸುಮಾರು ಒಂದು ಕೋಟಿ ನಲವತ್ತು ಲಕ್ಷ  ಬೆಲೆಬಾಳುವ ಯಂತ್ರವನ್ನು ಖರೀದಿಸಿ ಅದರಲೂ ಬ್ರಷ್ಟಾಚಾರ ಮಾಡಿ ಒಂದು ದಿನವು ಆ ಯಂತ್ರ ಚಾಲನೆಯಲ್ಲಿ ಇಲ್ಲ. ಅದೇ ರೀತಿ ಬೀದಿ ದೀಪಗಳ ನಿರ್ವಹಣೆ ಹಾಗೂ ಹೊಸ ಬೀದಿ ದೀಪಗಳ ಅಳವಡಿಕೆಯಲ್ಲೂ ಬ್ರಷ್ಟಾಚಾರವಾಗಿದೆ.  

ಹೊಸ ಕೇಬಲ್ ಅಳವಡಿಕೆಯಲ್ಲಿ ಬ್ರಷ್ಟಾಚಾರ. ಪ್ರತಿಯೊಂದು ಕಾಮಗಾರಿಗೂ ಕಾಮಗಾರಿ ನಾಮ ಫಲಕ ಹಾಕಬೇಕು, ಕಾಮಗಾರಿ ಹೆಸರು ಹಾಕಬೇಕು, ಅಂದಾಜು ಮೊತ್ತ, ಗುತ್ತಿಗೆದಾರನ ಹೆಸರು, ಯಾವ ಅನುದಾನದಲ್ಲಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ ಈ ಎಲ್ಲಾ ಮಾಹಿತಿಯನ್ನು ನಾಮ ಫಲಕದಲ್ಲಿ ಹಾಕಬೇಕು ಆದರೇ ನಗರಸಭೆಯವರು ಎಲ್ಲಿಯೂ ಕೂಡ ನಾಮಫಲಕ ಹಾಕುತ್ತಿಲ್ಲ. ಇದರಿಂದ ಒಂದು ಕಾಮಗಾರಿಗೆ ಬೇರೆ ಬೇರೆ ಇಲಾಖೆಯಲ್ಲಿ ಹಣ ದುರ್ಬಳಕೆಯಾಗುವುದು ನಿಲ್ಲುತ್ತದೆ. ನಡೆಯದೇ ಇರುವ ಕಾಮಗಾರಿಗಳಿಗೆ ಬೋಗಸ್ ಬಿಲ್ಲು ಮಾಡಿ ಮೂರನೇ ವ್ಯಕ್ತಿ ತಪಸಣಾ ವರದಿ ಸಂಸ್ಥೆಯವರು ಕೂಡಾ ಇದರಲ್ಲಿ ಭಾಗಿಯಾಗಿದ್ದು ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಅಂತಹ ವ್ಯಕ್ತಿ/ಸಂಸ್ಥೆಯ ವಿರುದ್ಧ ಕ್ರಮಿನಲ್ ಮೊಕ್ಕದ್ದಮೆ ದಾಖಲು ಮಾಡಿಕೊಳ್ಳಬೇಕು.

ಗಣೇಶನ ಹಬ್ಬದಲ್ಲಿ ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಖಾಸಗಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಅಲ್ಲಿ ಕೂಡಾ ಹಣ ದುರ್ಬಳಕೆಯಾಗಿದೆ. ಜಿಎಸ್ಟಿ ಹಣವನ್ನು ಸರ್ಕಾಕ್ಕೆ ಕಟ್ಟದೆ ಅದನ್ನು ಕೂಡಾ ನಗರಸಭೆ ಅಧಿಕಾರಿಗಳು ಕಾಮಗಾರಿ ಹೆಸರಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೇ ರೀತಿಯಾಗಿ ನೂರಾರು ಕಾಮಗಾರಿಗಳಲ್ಲಿ ಬ್ರಷ್ಟಾಚಾರ ನಡೆದಿದೆ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆಯಾಗಬೇಕಾದ ಜನರ ತೆರಿಗೆ ಹಣವು ಬ್ರಷ್ಟರ ಪಟ್ಟಭದ್ರ ಹಿತಾಶಕ್ತಿಗಳ ಜೇಬು ಸೇರುತ್ತಿದೆ ಹೀಗಾಗಿ ಕೊಪ್ಪಳ ನಗರಸಭೆ ಬ್ರಷ್ಟಾಚಾರವನ್ನು ಸಿಬಿಐಗೆ ವಹಿಸಿ ಸೂಕ್ತ ತನಿಖೆ ನೆಡಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಬೇಕು ದುರ್ಬಳಿಕೆಯ ಹಣವನ್ನು ವಸೂಲಿ ಮಾಡಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸುತ್ತದೆ. ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿಜಯ ಕುಮಾರ ಕವಲೂರ, ಜಿಲ್ಲಾ ಗೌರವಾಧ್ಯಕ್ಷರಾದ ಜಿ,ಎಸ್ ಗೋನಾಳ, ಜಿಲ್ಲಾ ಉಪಾಧ್ಯಾಕ್ಷರಾದ ಮಂಜುನಾಥ ಸಾಲಿಮಠ,   ತಾಲೂಕು ಅಧ್ಯಕ್ಷರಾದ ಮಹೇಶ ಅಲ್ಲಾನಗರ, ಜಿಲ್ಲಾ ಮುಂಖಡರಾದ ಶಿವಕುಮಾರ ಏಣಗಿ, ಉಪಸ್ಥಿತರಿದ್ದರು.