ಕಲಿಕಾ ಹಬ್ಬವನ್ನು ಕಲಿಕೆಯ ರೂಪದಲ್ಲಿ ಆಚರಿಸಿ : ನವೀನ ಜಿಗಜಿನ್ನಿ
ಮಹಾಲಿಂಗಪೂರ 07: ಕಲಿಕೆಯನ್ನು ಉತ್ಸವ ರೂಪದಲ್ಲಿ ಆಚರಿಸುವ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮವೇ ಕಲಿಕಾ ಹಬ್ಬವೆಂದು ಸಿ ಆರ್ ಪಿ ನವೀನ್ ಜಿಗಜಿನ್ನಿ ಹೇಳಿದರು. ಸಮೀಪದ ಢವಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಹಾಲಿಂಗಪೂರ ಹಾಗೂ ಮದಭಾವಿ ಕ್ಲಸ್ಟರ್ ಮಟ್ಟದ ಕಲಿಕಾಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕಲಿಕೆಯ ಮೇಲಿನ ಆಸಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಸಹಕಾರ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತದೆ,ಪಾಠ ಪುಸ್ತಕಗಳ ಮಿತಿಯನ್ನು ಮೀರಿ,ಅನುಭವಾಧಾರಿತ ಹಾಗೂ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡುವುದು ಕಲಿಕಾ ಹಬ್ಬದ ಪ್ರಮುಖ ಆಶಯವಾಗಿದೆ,ಕಲಿಕಾ ಹಬ್ಬವು ಮಕ್ಕಳಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತಂದು ಕಲಿಕೆಯನ್ನು ಸಂತೋಷದಾಯಕ ಅನುಭವವನ್ನಾಗಿ ರೂಪಿಸಿದ ಶೈಕ್ಷಣಿಕ ಉತ್ಸವವಾಗಿದ್ದು,ಕಲಿಕೆ ಎಂದರೆ ಬದುಕಿಗೆ ದಾರಿಯಾಗಿದೆ ಎಂದರು. ಮುಖ್ಯಗುರು ಡಿ ಎಂ ಮಹಾಜನ್, ಪಿಡಿಓ ಸಿದ್ದರಾಮೇಶ ಕುಂದರಗಿಮಠ,ಶ್ರೀಮತಿ ರೂಪಾ ಗುರವ,ಹಣಮಂತ ಮಾರಾಪೂರ,ಎಂ ಡಿ ನರಗಟ್ಟಿ,ಶಿವಾನಂದ ಪಟ್ಟೇದ,ಅಶ್ವಿನಿ ಬಡಿಗೇರ,ಪಿ ಎಂ ಬ್ಯಾಕೋಡಿ,ರೇಖಾ ಕುರುಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.