ಮುಂದಗೋಡ

ತಟ್ಟಿಹಳ್ಳಿ ಬಳಿ ಕಾರು-ಟ್ರ್ಯಾಕ್ಟರ್ ಮುಖಾಮುಕಿ ಡಿಕ್ಕಿ; ಮಗುಗೆ ಸಣ್ಣ ಗಾಯ

ತಟ್ಟಿಹಳ್ಳಿ ಬಳಿ ಕಾರು-ಟ್ರ್ಯಾಕ್ಟರ್ ಮುಖಾಮುಕಿ ಡಿಕ್ಕಿ; ಮಗುಗೆ ಸಣ್ಣ ಗಾಯ

ಮುಂಡಗೋಡ 01: ಟಿಬೇಟಿಯನ್ ಕಾಲೋನಿ ಸಮೀಪದ ತಟ್ಟಿಹಳ್ಳಿ ಬಳಿ ಕಾರು ಮತ್ತು ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿದೆ.  ಈ ಘಟನೆ ಗುರುವಾರ ಸಾಯಂಕಾಲ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಯಿಂದ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ಕೆಲಕಾಲ ಆತಂಕಗೊಂಡಿದ್ದಾರೆ. ಮುಂಡಗೋಡಿನಿಂದ ಯಲ್ಲಾಪುರದ ಕಡೆಗೆ ತೆರಳುತ್ತಿದ್ದ ಟ್ರಾಕ್ಟರ್ ಮತ್ತು ಯಲ್ಲಾಪುರದಿಂದ ಮುಂಡಗೋಡಿನತ್ತ ಬರುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದು ಪುಟ್ಟ ಮಗುವಿಗೆ ಸಣ್ಣ ಗಾಯಗಳು ಸಂಭವಿಸಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡ ಮಗುವಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ.  ಘಟನೆ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಅಪಘಾತದ ಕಾರಣವನ್ನು ತಿಳಿದುಕೊಳ್ಳಲು ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ. 


ಸುದ್ದಿ ಓದಿ