ಮತದಾರ ಜಾಗೃತಿಗಾಗಿ ಶಿಕ್ಷಕರಿಂದ ಬೈಕ್ ರ್ಯಾಲಿ
ಧಾರವಾಡ 12: ಧಾರವಾಡ ಶಹರ ಹಾಗೂ ಗ್ರಾಮೀಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಇಂದು ಸಂಜೆ ಬೈಕ್ ರ್ಯಾಲಿ ಮೂಲಕ ಮತದಾರ ಜಾಗೃತಿ ಮೂಡಿಸಲಾಯಿತು.
ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದ ಆವರಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ ಅವರು ಶಿಕ್ಷಕರೊಂದಿಗೆ ಬೈಕ್ ಚಲಾಯಿಸಿ, ರ್ಯಾಲಿಯಲ್ಲಿ ಪಾಲ್ಗೊಂಡರು.
ರ್ಯಾಲಿಯು ಸುಭಾಷ ರಸ್ತೆ ಮಾಕರ್ೇಟ್, ಹಳೇ ಡಿ.ಎಸ್.ಪಿ.ವೃತ್ತ, ಸಪ್ತಾಪೂರ ಬಾವಿ, ಕನರ್ಾಟಕ ಕಾಲೇಜು, ಪ್ರಧಾನ ಅಂಚೆ ಕಚೇರಿ, ಕೋರ್ಟ ವೃತ್ತದ ಮೂಲಕ ಕಲಾಭವನಕ್ಕೆ ಬಂದು ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ.ಖಾಜಿ, ವಿದ್ಯಾ ನಾಡಿಗೇರ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ. ಶೇಖ್, ಜಿ.ಎನ್. ನಂದನ್ ಹಾಗೂ ಇತರರು ಪಾಲ್ಗೊಂಡಿದ್ದರು. ಕಲಾ ತಂಡದ ಸದಸ್ಯರುಗಳಾದ ಎಫ್.ಬಿ. ಕಣವಿ, ಸಿ.ಎಂ. ಕೆಂಗಾರ, ಭಾರತಿ ಮನ್ನಿಕೇರಿ, ವ್ಹಿ.ಎನ್. ಕೀತರ್ಿವತಿ, ಜೆ.ಎಂ. ಗಾಮನಗಟ್ಟಿ, ಬಿ.ಎನ್. ಗೊರವರ, ಜಿ.ಟಿ. ದೊಡಮನಿ, ಎಂ.ಆರ್. ಪಾಲ್ತಿ, ಪ್ರಮಿಳಾ ಜಕ್ಕಣ್ಣವರ, ಮಂಜುನಾಥ ಮದ್ನೂರ ಹಾಗೂ ಡಾ. ರಾಮು ಮೂಲಗಿ ಜಾನಪದ ಗೀತೆಗಳ ಮೂಲಕ ಮತದಾನ ಜಾಗೃತಿ ಮಾಡಿದರು.
ಸುಮಾರು 250ಕ್ಕೂ ಹೆಚ್ಚು ಬೈಕ್ಗಳ ಮೂಲಕ ಶಿಕ್ಷಕರು ಸಂಚರಿಸಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 